×
Ad

ಕೊಳ್ಳೇಗಾಲ: ಬಸ್‍ ನಿಲ್ದಾಣದ ಬೀದಿಬದಿ ಹೋಟೆಲ್ ವ್ಯಾಪಾರಿಗಳ ಸಭೆ

Update: 2018-06-13 18:01 IST

ಕೊಳ್ಳೇಗಾಲ.ಜೂ.13: ಬೀದಿ ಬದಿ ವ್ಯಾಪಾರಿಗಳು ತಮ್ಮ ಜಾಗ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳಬೇಕು ಹಾಗೂ ಗುಣಮಟ್ಟದ ಆಹಾರ ಪದಾರ್ಥಗಳನ್ನು ಬಳಸಬೇಕು ಎಂದು ನಗರಸಭೆಯ ಅಧ್ಯಕ್ಷ ಎಸ್.ರಮೇಶ್ ಅವರು ಸೂಚಿಸಿದರು.

ಪಟ್ಟಣದ ನಗರಸಭೆಯ ಅಧ್ಯಕ್ಷರ ಕಚೇರಿಯಲ್ಲಿ ಬುಧವಾರ ಕರೆದಿದ್ದ ಬಸ್‍ನಿಲ್ದಾಣದ ಬೀದಿಬದಿಯ ಹೋಟೆಲ್ ವ್ಯಾಪಾರಿಗಳ ಸಭೆಯಲ್ಲಿ ಅವರು ಹೋಟೆಲ್‍ನ ಮಾಲಿಕರಿಗೆ ಸೂಚನೆ ನೀಡಿದರು. ಬಸ್‍ ನಿಲ್ದಾಣದಲ್ಲಿ ಬಳಿ ಬೀದಿಬದಿ ಹೋಟೆಲ್ ವ್ಯಾಪಾರಿಗಳು ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವುದರ ಜೊತೆಗೆ ಸುತ್ತಮುತ್ತಲ ಪ್ರದೇಶವನ್ನು ಸ್ವಚ್ಚತೆಯಿಂದ ಕಾಪಾಡಿಕೊಳ್ಳಬೇಕು. ಗುಣಮಟ್ಟದ ಆಹಾರವನ್ನು ಬಳಸುವ ಮೂಲಕ ತಮ್ಮ ಬಳಿ ಬರುವ ಗ್ರಾಹಕರ ಆರೋಗ್ಯದ ಕಡೆ ಹೆಚ್ಚು ಗಮನಹರಿಸಬೇಕು ಎಂದರು.

ಪಟ್ಟಣದ ಎಲ್ಲಾ ಬೀದಿ ಬದಿ ವ್ಯಾಪಾರಿಗಳು ನಗರ ಸಭೆಯಲ್ಲಿ ನೋದಂಣಿ ಮಾಡಿಸಿಕೊಳ್ಳಬೇಕು. ನೋಂದಣಿ ಮಾಡಿಸಿಕೊಳ್ಳದ ಬೀದಿಬದಿ ವ್ಯಾಪಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.

ಪರಿಸರ ಅಧಿಕಾರಿ ಧನಂಜಯ ಮಾತನಾಡಿ, ಪಟ್ಟಣದಲ್ಲಿ ಸಂಪೂರ್ಣವಾಗಿ ಪ್ಲಾಸ್ಟಿಕ್ ನಿಷೇಧ ಮಾಡಿರುವುದರಿಂದ್ದ ಎಲ್ಲಾ ಹೋಟೇಲ್‍ಗಳು ಹಾಗೂ ವ್ಯಾಪಾರಿಗಳು ಪ್ಲಾಸ್ಟಿಕ್ ಬಳಕೆಯನ್ನು ಸ್ಥಗಿತಗೊಳಿಸಿ ವ್ಯಾಪಾರ ಮಾಡುವಂತೆ ಹೇಳಿದರು.

ಸಭೆಯಲ್ಲಿ ನಗರಸಭೆಯ ಉಪಾಧ್ಯಕ್ಷ ಶಿವಾನಂದ, ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷ, ಸದಸ್ಯ ಪರಮೇಶ್ವರಯ್ಯ, ನಾಮನಿರ್ದೇಶಿತ ಸದಸ್ಯರಾದ ಮನೋಹರ್, ನರಸಿಂಹನ್, ಮುಖಂಡ ಖಿಜರ್, ಗೋವಿಂದ, ಆರೋಗ್ಯ ನಿರೀಕ್ಷಕಿ ಭೂಮಿಕ ಹಾಗೂ ಬೀದಿಬದಿಯ ವ್ಯಾಪಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News