×
Ad

ಮಂಡ್ಯ: ಹೆಜ್ಜೇನು ದಾಳಿಗೆ ವ್ಯಕ್ತಿ ಬಲಿ

Update: 2018-06-13 23:02 IST

ಮಂಡ್ಯ, ಜೂ.13: ಜಿಲ್ಲೆಯ  ಪ್ರವಾಸಿ ತಾಣ ಮುತ್ತತ್ತಿಯ ಕಾವೇರಿ ನದಿಯ ದಡದಲ್ಲಿ ಹೆಜ್ಜೇನು ದಾಳಿಯಿಂದ ಓರ್ವ ಓರ್ವ ಮೃತಪಟ್ಟು, ಹಲವರುಅಸ್ವಸ್ಥರಾಗಿರುವ ಘಟನೆ ಮಂಗಳವಾರ ನಡೆದಿದೆ.

ವೆಂಕಟೇಶ್ ಅಲಿಯಾಸ್ ಜಯರಾಮ್ (42) ಮೃತಪಟ್ಟ ವ್ಯಕ್ತಿ. ಮೂಲತಃ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದ ಬೆಂಗಳೂರಿನ ಜೆ.ಪಿ.ನಗರ ನಿವಾಸಿ ಜಯರಾಂ ಜೇನು ದಾಳಿಗೆ ಬಲಿಯಾಗಿದ್ದಾರೆ.

ಗಾರ್ಮೆಂಟ್ಸ್‍ನಲ್ಲಿ ಮೆಕಾನಿಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೆಂಕಟೇಶ್ ತನ್ನ ಸ್ನೇಹಿತರಾದ ನರೇಂದ್ರ ಬಾಬು, ಶಿವು, ವಸಂತ, ರಮೇಶ ಅವರ ಜೊತೆ  ಮುತ್ತತ್ತಿಯಲ್ಲಿ ದೇವರ ದರ್ಶನ ಪಡೆದು ಕಾವೇರಿ ನದಿಯ ದಡದಲ್ಲಿ ವಿಹರಿಸುತ್ತಿದ್ದ ವೇಳೆ ಜೇನು ದಾಳಿ ನಡೆದಿದೆ.

ವೆಂಕಟೇಶ್ ಸೇರಿದಂತೆ ಹಲವರು ಜೇನು ದಾಳಿಯಿಂದ ಗಾಯಗೊಂಡಿದ್ದು, ತಕ್ಷಣ ಸಾತನೂರು ಆಸ್ಪತ್ರೆಗೆ ಸೇರಿಸಲಾಯಿತು. ವೆಂಕಟೇಶ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ತಡರಾತ್ರಿ ಮೃತಪಟ್ಟಿದ್ದಾರೆ. ಮೃತರ ಪೋಷಕರು ಕೋರಿಕೆ ಮೇರೆಗೆ ಕಣ್ಣುಗಳನ್ನು ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ. 

ಹಲಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News