×
Ad

ಮಡಿಕೇರಿ: ಹೊಟೇಲ್ ಪ್ಯಾರೀಸ್ ಮಾಲಿಕ ಹಸನ್ ನಿಧನ

Update: 2018-06-14 23:14 IST

ಮಡಿಕೇರಿ ಜೂ.14: ಮಡಿಕೇರಿ ನಗರದ ಕಾಲೇಜು ರಸ್ತೆಯಲ್ಲಿರುವ ಹೊಟೇಲ್ ನ್ಯೂ ಪ್ಯಾರೀಸ್‍ನ ಮಾಲೀಕರಾದ ಎಂ.ಪಿ.ಹಸನ್ (75) ಅವರು ಇಂದು ನಿಧನ ಹೊಂದಿದ್ದಾರೆ.

ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹಸನ್ ಅವರು ಪತ್ನಿ, ಓರ್ವ ಪುತ್ರ ಹಾಗೂ ಐವರು ಪುತ್ರಿಯರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಕೇರಳದ ಮಟ್ಟನ್ನೂರ್ ನಲ್ಲಿ ನಡೆಯಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ವರ್ತಕ ಸಮೂಹ ಹಸನ್ ಅವರ ನಿಧನಕ್ಕೆ ಸಂತಾಪ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News