ವಿಶ್ವಕಪ್‌ಗೆ ವರ್ಣರಂಜಿತ ಚಾಲನೆ
Update: 2018-06-14 23:30 IST
ಇಪ್ಪತ್ತೊಂದನೇ ಆವೃತ್ತಿಯ ಫಿಫಾ ವಿಶ್ವಕಪ್‌ಗೆ ಇಲ್ಲಿನ ಲುಝ್ನಿಕಿ ಸ್ಟೇಡಿಯಂನಲ್ಲಿ ಗುರುವಾರ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಯಿತು. ಸಮಾರಂಭಕ್ಕೆ ಮೊದಲು ಸ್ಪೇನ್‌ನ ಮಾಜಿ ಗೋಲ್‌ಕೀಪರ್ ಐಕರ್ ಕ್ಯಾಸಿಲ್ಲಾಸ್ ಹಾಗೂ ರಶ್ಯದ ರೂಪದರ್ಶಿ ನಟಾಲಿಯಾ ವಡಿಯಾನೊವಾ ಸ್ಟೇಡಿಯಂನಲ್ಲಿ ನೆರೆದಿದ್ದ ಪ್ರೇಕ್ಷಕರಿಗೆ ವಿಶ್ವಕಪ್ ಟ್ರೋಫಿಯನ್ನು ಪ್ರದರ್ಶಿಸಿದರು. ಜನಪ್ರಿಯತೆಯಲ್ಲಿ ಒಲಿಂಪಿಕ್ಸ್‌ಗೆ ಸವಾಲು ಒಡ್ಡುವ ಏಕೈಕ ಕ್ರೀಡಾ ಹಬ್ಬ ವಿಶ್ವಕಪ್ ರಶ್ಯದ 11 ನಗರಗಳ 12 ತಾಣಗಳಲ್ಲಿ ಒಂದು ತಿಂಗಳ ಕಾಲ ನಡೆಯಲಿದೆ. ಗ್ರೂಪ್ ಹಂತ ಕೊನೆಗೊಳ್ಳುವ ತನಕ ಪ್ರತಿದಿನ ಮೂರು ಪಂದ್ಯಗಳು ನಡೆಯುತ್ತವೆ. ಟೂರ್ನಮೆಂಟ್‌ನ ಮೊದಲ ದಿನ ಒಂದು ಪಂದ್ಯ ನಡೆಯಲಿದೆ.