×
Ad

ವೀರಶೈವ ಮತ್ತು ಲಿಂಗಾಯತ ಎರಡು ಒಂದೇ: ಶಾಸಕ ಶಾಮನೂರು ಶಿವಶಂಕರಪ್ಪ

Update: 2018-06-15 14:39 IST

ದಾವಣಗೆರೆ, ಜೂ.15: ವೀರಶೈವ ಮತ್ತು ಲಿಂಗಾಯತ ಎರಡು ಒಂದೇ. ವೀರಶೈವ ಮಹಾಸಭೆ ಹಾಗೂ ಜಾಗತಿಕ ಲಿಂಗಾಯತ ಮಹಾ ಸಭೆ ಎರಡು ಸಂಘಟನೆ ಒಂದಾಗಬೇಕು ಎಂದು ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾ ಸಭೆ ಅಧ್ಯಕ್ಷ ಶಾಮನೂರು  ಶಿವಶಂಕರಪ್ಪ ಹೇಳಿದ್ದಾರೆ.
 ದಾವಣಗೆರೆಯಲ್ಲಿ ನಡೆದ ಕಾರ್ಯಕ್ರಮವೊಂದರ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಎರಡು ಸಂಘಟನೆಗಳ ಪ್ರಮುಖರ ಸಭೆ ಕರೆಯಲಾಗುವುದು. ಆದರೆ, ಜಾಗತಿಕ ಲಿಂಗಾಯಿತ ಮಹಾ ಸಭೆಯವರು ಶರತ್ತುಗಳನ್ನ ಹಾಕಿದರೆ ನಡೆಯಲ್ಲ. ಯಾವುದೇ ಶರತ್ತುಗಳು ಇಲ್ಲದೆ ಮಾತುಕತೆಗೆ ಬಂದರೆ ನಾವು ರೆಡಿ ಎಂದು ಹೇಳಿದರು.
 
ಸಚಿವ ಸ್ಥಾನಕ್ಕೆ ಒತ್ತಾಯಿಸುತ್ತಿರುವ ಎಂ.ಬಿ. ಪಾಟೀಲ್ ಬಗ್ಗೆ ಪ್ರತಿಕ್ರಿಯಿಸಿದ ಶಿವಶಂಕರಪ್ಪ, ಕಾಂಗ್ರೆಸ್ ಪಕ್ಷ ದಲ್ಲಿ ಒತ್ತಡ ತಂತ್ರಗಳು ನಡೆಯಲ್ಲ. ಎಂ.ಬಿ.ಪಾಟೀಲರ ಬುಡಬುಡಕಿ ಕಾಂಗ್ರೆಸ್ ಪಕ್ಷದಲ್ಲಿ ನಡೆಯದು ಎಂದರು. ನಾನೇನು ಸಚಿವ ಸ್ಥಾನದ ಹಿಂದೆ ಬಿದ್ದಿಲ್ಲ. ಸಚಿವ ಸ್ಥಾನಕ್ಕೂ ಹೆಚ್ಚಾಗಿ ದಾವಣಗೆರೆಯಲ್ಲಿ ಅಭಿವೃದ್ಧಿ ಕಾರ್ಯಮಾಡುವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News