×
Ad

ಕಾಸರಗೋಡು: ಸರಣಿ ಅಪಘಾತದಲ್ಲಿ ಇಬ್ಬರಿಗೆ ಗಾಯ

Update: 2018-06-15 15:46 IST

ಕಾಸರಗೋಡು, ಜೂ.15: ನಗರ ಹೊರವಲಯದ ಅಣಂಗೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ನಡೆದ ಸರಣಿ ಅಪಘಾತದಲ್ಲಿ ಇಬ್ಬರು ಗಾಯಗೊಂಡ ಘಟನೆ ನಡೆದಿದೆ. ಅಡುಗೆ ಅನಿಲ ಸಿಲಿಂಡರ್ ಸಾಗಾಟ ಮಾಡುತ್ತಿದ್ದ ಲಾರಿ ಮತ್ತು ಕಾರು ಡಿಕ್ಕಿ ಹೊಡೆದಿದ್ದು , ನಿಯಂತ್ರಣ ತಪ್ಪಿದ ಲಾರಿ ಆಟೋ ರಿಕ್ಷಾ ಮತ್ತು ಕಂಟೈನರ್ ಲಾರಿಗೆ ಡಿಕ್ಕಿ ಹೊಡೆದು ಮಗುಚಿ ಬಿದ್ದಿದೆ.ಕಾಞ0ಗಾಡ್ ಕಡೆಯಿಂದ ಮಂಗಳೂರಿಗೆ ಬರುತ್ತಿದ್ದ ಅಡುಗೆ ಅನಿಲ ಸಿಲಿಂಡರ್ ತುಂಬಿದ ಲಾರಿ ಮತ್ತು ಕಾಸರಗೋಡಿನಿಂದ ವಿದ್ಯಾನಗರದತ್ತ ತೆರಳುತ್ತಿದ್ದ ಕಾರು ನಡುವೆ ಅಪಘಾತ ನಡೆದಿದ್ದು , ಬಳಿಕ ಚಾಲಕನ ನಿಯಂತ್ರಣ ತಪ್ಪಿ ಆಟೋ ಮತ್ತು ಶೋ ರೂಂ ಮುಂಭಾಗದಲ್ಲಿ ನಿಲುಗಡೆಗೊಳಿಸಿದ್ದ ಕಂಟೈನರ್ ಗೆ ಡಿಕ್ಕಿ ಹೊಡೆದಿದೆ. ಲಾರಿ ಚಾಲಕ ಕರ್ನಾಟಕ ಪುತ್ತೂರಿನ ರಾಜು ( 61), ಕಾರು ಚಾಲಕ ಪಡುವಡ್ಕದ ನಿಜಾಮುದ್ದೀನ್ (35)ಗಾಯಗೊಂಡಿದ್ದು, ಈ ಪೈಕಿ ನಿಜಾಮುದ್ದೀನ್‌ರವರ ಸ್ಥಿತಿ ಗಂಭೀರವಾಗಿದೆ. ಲಾರಿಯಲ್ಲಿ ಅನಿಲ ರಹಿತ ಸಿಲಿಂಡರ್ ಮಾತ್ರ ಇದ್ದುದರಿಂದ ಭಾರೀ ದುರಂತ ತಪ್ಪಿದೆ ಎನ್ನಬಹುದು.ಘಟನಾ ಸ್ಥಳಕ್ಕೆ ಕಾಸರಗೋಡು ನಗರ ಠಾಣಾ ಪೊಲೀಸರು, ಅಗ್ನಿಶಾಮಕ ದಳದ ಸಿಬಂದಿಗಳು, ಸ್ಥಳೀಯರು ತಲಪಿ ಗಾಯಾಳುಗಳನ್ನು ಆಸ್ಪತ್ರೆಗೆ ತಲಪಿಸಿ, ಸಂಚಾರ ಸುಗಮಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News