ತುಮಕೂರು: ಕೋಳಿ ಫಾರಂ ನುಗ್ಗಿ 400 ಕೋಳಿಗಳನ್ನು ಕೊಂದ ಚಿರತೆ !

Update: 2018-06-16 06:15 GMT

ತುಮಕೂರು, ಜೂ. 16: ಅಹಾರ ಅರಸಿ ಬಂದ ಚಿರತೆ ಕೋಳಿ ಫಾರಂಗೆ ನುಗ್ಗಿ ಸುಮಾರು 400 ಕೋಳಿಗಳನ್ನು ಕೊಂದು ಹಾಕಿರುವ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನ ಕಸಬಾ ಹೋಬಳಿಯ ತುಂಬಾಡಿ ಗ್ರಾಮ ಪಂಚಾಯತ್ ಕೇಂದ್ರ ಸ್ಥಾನದಲ್ಲಿ ನಡೆದಿದೆ.

ರೈತ ಮಾರುತಿ ಎಂಬುವರ ತೋಟದ ಮನೆಯಲ್ಲಿರುವ ಕೋಳಿಫಾರಂನಲ್ಲಿ ಈ ಘಟನೆ ನಡೆದಿದ್ದು, ಮಾರುತಿ ಶನಿವಾರ ಮುಂಜಾನೆ ಕೋಳಿಗಳಿಗೆ ಆಹಾರ ಹಾಕಲು ಫಾರಂಗೆ ತೆರಳಿದ್ದರು. ಈ ವೇಳೆ ಫಾರಂನಲ್ಲಿ ಚಿರತೆ ಅಡಗಿರುವುದನ್ನು ಗಮನಿಸಿ ತಕ್ಷಣವೇ ಹೊರಗೆ ಬಂದು ಬಾಗಿಲು ಹಾಕಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಚಿರತೆ ಸೆರೆಹಿಡಿಯಲು ಹಾಸನದಿಂದ ಅರವಳಿಕೆ ತಜ್ಞರು ಆಗಮಿಸಿದ್ದು, ಸ್ಥಳದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News