ಹನೂರು: ಉದ್ಯೋಗ ಖಾತರಿ ಯೋಜನೆಯ 2018-19ನೇ ಸಾಲಿನ ಮೊದಲ ಹಂತದ ಸಾಮಾಜಿಕ ಪರಿಶೋಧನೆ ಗ್ರಾಮ ಸಭೆ

Update: 2018-06-16 16:24 GMT

ಹನೂರು,ಜೂ.16: ಗ್ರಾಮಸ್ಥರು ನರೇಗಾ ಯೋಜನೆಯ ಮುಖಾಂತರ ಕೊಟ್ಟಿಗೆ ನಿರ್ಮಿಸಿದರೆ ಗ್ರಾಮದಲ್ಲಿ ಜಾನುವಾರುಗಳ ಸಾಕಾಣಿಕೆ ಹೆಚ್ಚಾಗಿ, ಸ್ಥಳೀಯವಾಗಿ  ಹೆಚ್ಚಿನ ರೀತಿಯಲ್ಲಿ ಹೈನುಗಾರಿಕೆಗೆ ಪ್ರೋತ್ಸಾಹ ನೀಡಿದಂತೆ ಆಗುತ್ತದೆ ಎಂದು  ಪಿ.ಡಿ.ಒ ಗಂಗಾದರ್ ತಿಳಿಸಿದರು.

ಹನೂರು ಕ್ಷೇತ್ರ ವ್ಯಾಪಿಯ್ತ ಮಿಣ್ಯಂ ಗ್ರಾ.ಪಂ. ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ 2018-19ನೇ ಸಾಲಿನ ಮೊದಲ ಹಂತದ ಸಾಮಾಜಿಕ ಪರಿಶೋಧನೆ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು, ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಗ್ರಾಮಸ್ಥರು ಹೆಚ್ಚಾಗಿ ಕೊಟ್ಟಿಗೆ,  ನಿರ್ಮಾಣ ಮಾಡುವುದರಿಂದ  ಅದು ಗ್ರಾಮದಲ್ಲಿ ಒಂದು ಆಸ್ತಿಯಾಗುವುದರ ಜೊತೆಗೆ  ಹೆಚ್ಚು ಜಾನುವಾರುಗಳ ಸಾಕಾಣಿಕೆಯಿಂದಾಗಿ ಹಾಲಿನ ಉತ್ಪತಿ ಹೆಚ್ಚಾಗಿ ಸ್ಥಳೀಯವಾಗಿ ಪಶುಪಾಲನೆ ಮತ್ತು ಹೈನುಗಾರಿಕೆಗೆ ಪ್ರೋತ್ಸಾಹ ನೀಡಿದಂತೆ ಆಗುತ್ತದೆ .ಇದರ ಜೊತೆಗೆ ,ವಸತಿ ನಿರ್ಮಾಣ ಜಮೀನು ಸಮತಟ್ಟು, ಕೃಷಿಹೊಂಡ, ಒಕ್ಕಣೆಕಣ, ಸಿಸಿರಸ್ತೆ, ಚರಂಡಿ, ಹೊಗದ್ದೆಗಳಿಗೆ ತೆರಳುವ ಸಾರ್ವಜನಿಕರ ಜಮೀನು ರಸ್ತೆ, ಕೆರೆಕಟ್ಟೆ ಹೂಳು ತೆಗೆಯುವುದು, ಸಸಿ ನೆಡುವುದು, ಶೌಚಾಲಯ ನಿರ್ಮಾಣ ಸೇರಿದಂತೆ ಹತ್ತು ಹಲವಾರು ಕಾಮಾಗಾರಿಗಳನ್ನು ನಿರ್ವಹಿಸಬಹುದು ಎಂದರು.

ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ಮುಂದೆ ಬಂದು ಉದ್ಯೋಗ ಕೇಳಿ ಈ ಎಲ್ಲಾ ಕಾಮಗಾರಿಗಳನ್ನು ಮಾಡಬಹುದಾಗಿದೆ ಮತ್ತು ಈ ಹಿಂದೆ ಇದ್ದ ಜಾಬ್ ಕಾರ್ಡ್‍ಗಳನ್ನು ರದ್ದುಗೂಳಿಸಿ ನವೀಕರಿಸಿ ವಿನೂತನವಾದ ರೀತಿಯಲ್ಲಿ ನೀಡಲು ಸರ್ಕಾರವು ಆದೇಶ ನೀಡಿರುವುದರಿಂದ, ಗ್ರಾಮಸ್ಥರು ಖುದ್ದಾಗಿ ಪಂಚಾಯತಿಗೆ ಬಂದು ಜಾಬ್ ಕಾರ್ಡ್‍ಗಳನ್ನು ನವೀಕರಣಗೂಳ್ಳಿಸಬೇಕು ಮತ್ತು ಪ್ರಸ್ತುತ ವರ್ಷದಿಂದ ಒಂದು ದಿನದ ಕೂಲಿಯಾಗಿ 249ರೂ. ನಿಗಧಿಯಾಗಿದ್ದು ಮತ್ತು  ಗ್ರಾಮದ 10 ಕಿಮೀ ವ್ಯಾಪ್ತಿಯಲ್ಲಿ ಹೋಗಿ ಕೆಲಸ ಮಾಡಿದರೆ ಪ್ರಯಾಣ ಭತ್ಯೆ  ರೂ.10  ನೀಡಲಾಗುವುದು ಆದ್ದರಿಂದ ಈ ಮಹತ್ತರ ಯೋಜನೆಯು ಗ್ರಾಮೀಣ ಪ್ರದೇಶಗಳ ಸರ್ವತೋಮುಖ ಅಭಿವೃದ್ದಿಗೆ ಪೂರಕವಾಗಿದ್ದು ಉತ್ತಮವಾದ ರೀತಿಯಲ್ಲಿ  ಗ್ರಾಮಸ್ಥರು ಸದ್ಬಳಕೆ ಮಾಡಿಕೂಳ್ಳಿ ಎಂದರು 

ಇದೇ ಸಂದರ್ಭದಲ್ಲಿ ಗ್ರಾಪಂ ಅದ್ಯಕ್ಷೆ ಮಹದೇವಮ್ಮ , ಉಪಾದ್ಯಕ್ಷ ಮುನಿಯಮ್ಮ, ನೂಡಲ್ ಅಧಿಕಾರಿ ಶಿವರಾಜ್ , ತಾಲ್ಲೂಕು ಸಂಯೋಜಕ ಮನೋಹರ್ ಇನ್ನಿತರರು ಹಾಜರಿದ್ದರು 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News