ಜಾಗತಿಕ ಸಂಪತ್ತಿನ ಅರ್ಧದಷ್ಟು ಮಿಲಿಯಾಧೀಶರ ಬಳಿ

Update: 2018-06-16 19:05 GMT

ಲಂಡನ್, ಜೂ. 16: ಜಗತ್ತಿನ ಜನರ ವೈಯಕ್ತಿಕ ಸಂಪತ್ತು ಕಳೆದ ವರ್ಷ 201.9 ಲಕ್ಷ ಕೋಟಿ ಡಾಲರ್ ಆಗಿತ್ತು. 2016ಕ್ಕೆ ಹೋಲಿಸಿದರೆ ಇದು  ಶೇ.12 ಹೆಚ್ಚಳವಾಗಿದೆ ಎಂದು ಬಾಸ್ಟನ್ ಕನ್ಸಲ್ಟಿಂಗ್ ಗ್ರೂಪ್ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯೊಂದರಲ್ಲಿ ತಿಳಿಸಿದೆ.

ಇದು ಕಳೆದ 5 ವರ್ಷಗಳ ಅವಧಿಯಲ್ಲಿನ ಗರಿಷ್ಠ ವಾರ್ಷಿಕ ಏರಿಕೆಯಾಗಿದೆ.

ಈಗ ಮಿಲಿಯಾಧೀಶರು ಮತ್ತು ಬಿಲಿಯಾಧೀಶರುಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಒಟ್ಟು ಒಟ್ಟು ಜಾಗತಿಕ ಖಾಸಗಿ ಸಂಪತ್ತಿನ ಸುಮಾರು ಅರ್ಧದಷ್ಟು ಅವರ ಬಳಿಯೇ ಇದೆ.

‘‘ಮಿಲಿಯಾಧೀಶರು ಹೊಂದಿರುವ ಸಂಪತ್ತಿನಲ್ಲಿ ಹೆಚ್ಚಳವಾಗಿದೆಯೆಂದರೆ, ಬಡವರು ಇನ್ನಷ್ಟು ಬಡವರಾದಂತೆ ಅಲ್ಲ. ಬದಲಿಗೆ, ಪ್ರತಿಯೊಬ್ಬರು ಶ್ರೀಮಂತರಾಗುತ್ತಿದ್ದಾರೆ. ಅದರಲ್ಲೂ, ಶ್ರೀಮಂತರು ಕ್ಷಿಪ್ರವಾಗಿ ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ’’ ಎಂದು ವರದಿಯ ಪ್ರಧಾನ ಲೇಖಕ ಅನಾ ಝಕ್ರೆವ್‌ಸ್ಕಿ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News