ಮೈಸೂರು: ಪತ್ನಿಯ ಮೇಲಿನ ಹಲ್ಲೆ ಆರೋಪಿಯ ಬಂಧನ
Update: 2018-06-19 22:23 IST
ಮೈಸೂರು,ಜೂ.19: ಕುಡಿದ ಮತ್ತಿನಲ್ಲಿ ಪತ್ನಿ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದ ಪತಿಯನ್ನು ಕುವೆಂಪುನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಎಳೆನೀರು ವ್ಯಾಪಾರಿ ಅಂಕನಾಯಕ ಬಂಧಿತ ವ್ಯಕ್ತಿಯಾಗಿದ್ದು, ರಾಮಕೃಷ್ಣನಗರ ಹೆಚ್ ಬ್ಲಾಕ್ ನಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಪತ್ನಿಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದ. ಈತನನ್ನು ಕೊಲೆ ಯತ್ನದ ಆರೋಪದ ಮೇಲೆ ಬಂಧಿಸಲಾಗಿದ್ದು, ಈ ಸಂಬಂಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.