×
Ad

ಮೈಸೂರು: ಜೂ.21 ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ

Update: 2018-06-19 22:26 IST

ಮೈಸೂರು,ಜೂ.19: ಮೈಸೂರು ರೇಸ್‍ಕೋರ್ಸ್ ಆವರಣದಲ್ಲಿ  ಜೂ.21 ರ ಗುರುವಾರ ಬೆಳಿಗ್ಗೆ 6 ರಿಂದ 8 ಗಂಟೆಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಲಿದ್ದು, ಇದಕ್ಕಾಗಿ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ.

ಬೆಳಿಗ್ಗೆ 5 ಗಂಟೆಯಿಂದ ಕೆ.ಎಸ್.ಆರ್.ಟಿ.ಸಿ ಬಸ್‍ಗಳು ನಿಗದಿತ ತಾಣಗಳಿಂದ ರೈಸ್‍ಕೋರ್ಸ್‍ನವರೆಗೆ ಸಂಚರಿಸುತ್ತವೆ. ಯೋಗದಲ್ಲಿ ಪಾಲ್ಗೊಳ್ಳುವವರು ಟಿಕೇಟ್ ಪಡೆದು ಬಸ್ ಸೌಲಭ್ಯ ಉಪಯೋಗಿಸಿಕೊಳ್ಳಬಹುದು.

ಗೇಟ್ ನಂಬರ್ 1 ಕಾರಂಜಿಕೆರೆ, ಗೇಟ್ ನಂ-2 ರೇಸ್‍ಕೋರ್ಸ್ ಮುಖ್ಯದ್ವಾರ, ಗೇಟ್ ನಂ-3 ಮತ್ತು 4 ಮಾಲ್‍ಆಫ್ ಮೈಸೂರು ಎದುರು, ಗೇಟ್ ನಂ-5 ಲಾರಿಸ್ಟ್ಯಾಂಡ್, ಗೇಟ್ ನಂ-6 ಗಾಲ್ಫ್‍ಕೋರ್ಸ್ ಹಿಂಬದಿ ಹಾಗೂ ಗೇಟ್ ನಂ-7 ಸಿ.ಎ.ಆರ್ ಗ್ರೌಂಡ್ಸ್ ಎದುರು ಇರುತ್ತದೆ. ಗೇಟ್ ನಂ-7ರಲ್ಲಿ ಗಣ್ಯರಿಗೆ(ವಿಐಪಿ) ಮಾತ್ರ ಪ್ರವೇಶ ನಿಗದಿ ಪಡಿಸಲಾಗಿದೆ. ಸಾರ್ವಜನಿಕರು ಗೇಟ್ ಸಂಖ್ಯೆ 1 ರಿಂದ 6ರ ವರೆಗೆ ಬಳಸಬಹುದು. ಗೇಟ್ 7ರಲ್ಲಿ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ಎಲ್ಲಾ ಗೇಟ್‍ಗಳಲ್ಲೂ ಸ್ವಯಂಸೇವಕರು ಇದ್ದು, ಮಾರ್ಗದರ್ಶನ ಮಾಡುತ್ತಾರೆ.

ಎಲ್ಲಾ ಗೇಟ್‍ಗಳನ್ನು ಬೆಳಿಗ್ಗೆ 5 ಗಂಟೆಯಿಂದಲೇ ತೆರೆಯಲಾಗುತ್ತದೆ. ಬೆಳಿಗ್ಗೆ 6 ಗಂಟೆಯೊಳಗೆ ರೈಸ್‍ಕೋರ್ಸ್‍ನ ಒಳಗಡೆ ಸೇರಿಕೊಳ್ಳಬೇಕು.  ಸಾವಿರಾರು ವಾಹನಗಳು ಒಂದೇ ಸಮಯದಲ್ಲಿ ಬರುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತದೆ. ಆದ್ದರಿಂದ ಸಾಕಷ್ಟು ಮುಂಚಿತವಾಗಿ ಮನೆಯಿಂದ ಹೊರಡಬೇಕು.

ವಾಹನಗಳ ಪಾರ್ಕಿಂಗ್‍ಗೆ ಸೂಕ್ತ ವ್ಯವಸ್ಥೆಯನ್ನು ಮೈಸೂರು ನಗರ ಪೊಲೀಸರು ನಿಗದಿಪಡಿಸಿರುತ್ತಾರೆ. ಯೋಗದಲ್ಲಿ ಪಾಲ್ಗೊಳ್ಳುವವರು ತರಕಾರಿ ಮಾರುಕಟ್ಟೆರಸ್ತೆ(ಎಂ.ಜಿ.ರಸ್ತೆ)ಯು ತುಂಬಾ ಇಕ್ಕಟ್ಟಿದ್ದು, ಇದನ್ನುಬಳಸದೆ ಇತರ ಮಾರ್ಗಗಳನ್ನು ಬಳಸುವುದು ಒಳ್ಳೆಯದು. 70 ಯೋಗ ಬ್ಲಾಕ್‍ಗಳನ್ನು ಮಾಡಲಾಗಿದ್ದು, ಒಂದು ಬ್ಲಾಕ್‍ನಲ್ಲಿ 300 ಜನ ಕುಳಿತುಕೊಳ್ಳಬಹುದು. ಪ್ರತಿ ಬ್ಲಾಕ್‍ಗಳಲ್ಲೂ ಸ್ವಯಂ ಸೇವಕರಿದ್ದು ಮಾರ್ಗದರ್ಶನ ನೀಡುತ್ತಾರೆ. ಅದರಂತೆ ಯೋಗಬಂಧುಗಳು ಆಸೀನರಾಗಬೇಕು. ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುವುದು. ಯೋಗಬಂಧುಗಳ ಅನುಕೂಲಕ್ಕಾಗಿ ಸೂಕ್ತ ಶೌಚಾಲಯ ವ್ಯವಸ್ಥೆ ಇರುತ್ತದೆ. ಯೋಗ ಪ್ರದರ್ಶನದ ನಂತರ ಲಘು ಉಪಹಾರ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಇರುತ್ತದೆ. ವೈದ್ಯಕೀಯ ಸಹಾಯ ಕೇಂದ್ರದ ವ್ಯವಸ್ಥೆ ಇದೆ. ಪೊಲೀಸ್ ಭದ್ರತಾ ವ್ಯವಸ್ಥೆ ಇರುತ್ತದೆ. ಯೋಗದಲ್ಲಿ ಪಾಲ್ಗೊಳ್ಳುವವರು ಯೋಗಾಮ್ಯಾಟ್, ಅಗತ್ಯಕ್ಕೆ ತಕ್ಕಂತೆ ಕುಡಿಯುವ ನೀರು ಹಾಗೂ ಒಂದು ಚಿಕ್ಕ ಕೈ ಚೀಲ ತರಬೇಕು. (ಹೆಚ್ಚು ನೀರು ಕುಡಿಯದೇ ಯೋಗ ಪ್ರದರ್ಶನಕ್ಕೆ ಆಗಮಿಸುವುದು ಸೂಕ್ತ) ಎಂದು ಪ್ರಕಟಣೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News