ಸೋಮವಾರಪೇಟೆ: ಮರದ ರೆಂಬೆ ಬಿದ್ದು ರಸ್ತೆ ಸಂಚಾರ ಸ್ಥಗಿತ
Update: 2018-06-20 17:07 IST
ಸೋಮವಾರಪೇಟೆ,ಜೂ.20: ಸೋಮವಾರಪೇಟೆ, ಶನಿವಾರಸಂತೆ ರಾಜ್ಯ ಹೆದ್ದಾರಿಯ ಶಿವಪುರ ಸಮೀಪ ಮಾವಿನ ಮರದ ರೆಂಬೆ ಮುರಿದು ರಸ್ತೆ ಗಡ್ಡಲಾಗಿ ಬಿದ್ದ ಪರಿಣಾಮ ಒಂದು ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡಿತು.
ಬೆಳಿಗ್ಗೆ 7.30ಕ್ಕೆ ಗಂಟೆಗೆ ಘಟನೆ ಸಂಭವಿಸಿದ್ದು, ವಾಹನ ದಟ್ಟಣೆ ಕಡಿಮೆಯಿದ್ದ ಕಾರಣ ಅನಾಹುತ ತಪ್ಪಿದಂತಾಗಿದೆ. ರೆಂಬೆ ಬಿದ್ದ ರಭಸಕ್ಕೆ ವಿದ್ಯುತ್ ಕಂಬ ಮುರಿದು, 11ಕೆ.ವಿ. ತಂತಿಗಳು ತುಂಡಾಗಿವೆ. ಮಾಹಿತಿ ಪಡೆದ ಲೋಕೋಪಯೋಗಿ ಮತ್ತು ಸೆಸ್ಕ್ ಸಿಬ್ಬಂದಿಗಳು ವಿದ್ಯುತ್ ಮಾರ್ಗ ಸರಿಪಡಿಸಿದರು.
ಸೋಮವಾರಪೇಟೆಯಿಂದ ಕೊಡ್ಲಿಪೇಟೆವರೆಗಿನ ರಾಜ್ಯ ಹೆದ್ದಾರಿಯ ಬದಿಯಲ್ಲಿರುವ ಅಪಾಯದ ಮರಗಳನ್ನು ಕೂಡಲೆ ತೆರವುಗೊಳಿಸಬೇಕು. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಹಾಗು ಅರಣ್ಯ ಇಲಾಖೆ ಕ್ರಮಕೈಗೊಳ್ಳಬೇಕೆಂದು ಬೀಟಿಕಟ್ಟೆ ರಾಜು ಒತ್ತಾಯಿಸಿದ್ದಾರೆ.