ಮಡಿಕೇರಿ: ಮ್ಯಾನೇಜಿಂಗ್ ಟ್ರಸ್ಟಿ ಚೆಪ್ಪುಡೀರ ಟಿ. ದೇವಯ್ಯ ನಿಧನ
Update: 2018-06-20 17:19 IST
ಮಡಿಕೇರಿ, ಜೂ.20: ಗೋಣಿಕೊಪ್ಪ ಶ್ರೀ ಉಮಾಮಹೇಶ್ವರಿ ದೇವಾಲಯದ ಮ್ಯಾನೇಜಿಂಗ್ ಟ್ರಸ್ಟಿಗಳಾಗಿ ಸುಮಾರು 35 ವರ್ಷಗಳ ಕಾಲ ಸೇವೆ ಸಲ್ಲಿಸಿ ದೇವಾಲಯದ ಸರ್ವತೋಮುಖ ಬೆಳವಣಿಗೆಗೆ ಕಾರಣಕರ್ತರಾದ ಚೆಪ್ಪುಡೀರ ಟಿ. ದೇವಯ್ಯ(ತಮ್ಮು)(70) ರವರು ನಿಧನರಾಗಿದ್ದಾರೆ.
ಮೃತರು ಪತ್ನಿ, ಇಬ್ಬರು ಪುತ್ರರನ್ನು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಚೆಪ್ಪುಡೀರ ಟಿ. ದೇವಯ್ಯ ಅವರ ನಿಧನಕ್ಕೆ ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.