ಶಿವಮೊಗ್ಗ: ಜೂ.29 ರಿಂದ ಕನ್ನಡ ವಿಜ್ಞಾನ ಸಮ್ಮೇಳನ
Update: 2018-06-20 20:12 IST
ಬೆಂಗಳೂರು, ಜೂ.20: ಕರ್ನಾಟಕ ವಿಜ್ಞಾನ ಪರಿಷತ್ ಜೂ.29, 30 ಹಾಗೂ ಜು.1ರಂದು ಶಿವಮೊಗ್ಗದ ಕುವೆಂಪು ಮಂದಿರದಲ್ಲಿ 11ನೆ ರಾಜ್ಯಮಟ್ಟದ ಕನ್ನಡ ವಿಜ್ಞಾನ ಸಮ್ಮೇಳನವನ್ನು ಆಯೋಜಿಸಿದೆ.
ಸಮ್ಮೇಳನದಲ್ಲಿ ನಾಡಿನ ಹಿರಿಯ ವಿಜ್ಞಾನಿಗಳು, ಶಿಕ್ಷಣ ತಜ್ಞರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಲಿದ್ದು, ಕೃಷಿ, ಆರೋಗ್ಯ, ವಿಜ್ಞಾನ ಸಾಹಿತ್ಯ ಸೇರಿದಂತೆ ಹಲವು ಜನಪರ ವಿಷಯಗಳ ಕುರಿತು ಸಂವಾದ ಗೋಷ್ಟಿಗಳನ್ನು ಏರ್ಪಡಿಸಲಾಗಿದೆ. ಈ ಸಮ್ಮೇಳನದಲ್ಲಿ ಭಾಗವಹಿಸುವ ಆಸಕ್ತರು ನೋಂದಣಿ ಅರ್ಜಿಗಳಿಗಾಗಿ ವಿಜ್ಞಾನ ಪರಿಷತ್‌ನ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ವಿಜ್ಞಾನ ಪರಿಷತ್ ಕೇಂದ್ರ ಕಚೇರಿ ಯ ದೂ.080-26718939, 9008442557ಕ್ಕೆ ಸಂಪರ್ಕಿಸಲು ಪತ್ರಿಕಾ ಪ್ರಕಟನೆಯಲ್ಲಿ ಕೋರಲಾಗಿದೆ.