ಹನೂರು: ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆ
ಹನೂರು,ಜೂ.20: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಯೋಜನೆಯು ಇಂದು ಗ್ರಾಮೀಣ ಭಾಗದ ಜನರ ಸಂಜೀವಿನಿಯಾಗಿದೆ ಎಂದು ಹೂಗ್ಯಂ ಗ್ರಾಪಂ ಕಾರ್ಯದರ್ಶಿರಾಜಣ್ಣ ತಿಳಿಸಿದರು
ತಾಲೂಕಿನ ಹೂಗ್ಯಂ ಗ್ರಾಮ ಪಂಚಾಯತ್ 2018-2019ಸಾಲಿನ ಮೊದಲನೇ ಹಂತದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋದನೆ ಗ್ರಾಮ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಉದ್ಯೋಗ ಖಾತ್ರಿ ಯೋಜನೆ ಮುಖಾಂತರ ಗ್ರಾಮೀಣ ಭಾಗದಲ್ಲಿ ಅತ್ಯಂತ ಕೆಳ ಮಟ್ಟದಲ್ಲಿರುವ ಬಡವರನ್ನು ಅಭಿವೃದ್ದಿಯತ್ತ ಕರೆದುಕೊಂಡು ಹೋಗಲು ಒಂದು ಸೂಕ್ತ ಮಾರ್ಗ ಸೂಚಿಯಾಗಿದ್ದು, ಉದ್ಯೋಗ ಖಾತ್ರಿ ಯೋಜನೆಯ ಮುಖಾಂತರ ಪ್ರತಿಯೊಬ್ಬ ವ್ಯಕ್ತಿಗೂ ಸಹ ಜೀವನಕ್ಕೆ ಅತ್ಯಂತ ಅವಶ್ಯಕವಾದಂತಹ ಸವಲತ್ತುಗಳನ್ನು ಕೊಳ್ಳಲು ಜೀವನದಲ್ಲಿ ಒಂದು ಆದಾಯ ಮುಖ್ಯ. ಆ ಒಂದು ಆದಾಯ ಮೂಲವನ್ನು ಗ್ರಾಮೀಣ ಮಟ್ಟದಲ್ಲಿ ನರೇಗಾ ಯೋಜನೆ ಮುಖಾಂತರ ಸರ್ಕಾರ ಉದ್ಯೋಗಗಳನ್ನು ಕಲ್ಪಿಸಿವುದರಿಂದ ಗ್ರಾಮೀಣ ಭಾಗದ ಜನರ ಪಾಲಿಗೆ ಈ ಯೋಜನೆ ಸಂಜೀವಿನಿಯಾಗಿ ಮಾರ್ಪಟ್ಟಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ರಾಜೇಶ್ವರಿ, ಸದಸ್ಯರಾದ ಬಸವಣ್ಣ, ಗಣೇಶ್, ರೂಪ, ನೂಡಲ್ ಅಧಿಕಾರಿ ಗುರುಪ್ರಸಾದ್ ತಾಲೂಕು ಸಂಯೋಜಕ ಮನೋಹರ್ ಇನ್ನಿತರರು ಹಾಜರಿದ್ದರು.