ಮಕ್ಕಳನ್ನು ಪ್ರತ್ಯೇಕಗೊಳಿಸುವ ವಲಸೆ ನೀತಿಯನ್ನು ಕೊನೆಗೊಳಿಸಿದ ಟ್ರಂಪ್

Update: 2018-06-21 06:18 GMT

ವಾಷಿಂಗ್ಟನ್‌,ಜೂ.21:ದೇಶದೊಳಕ್ಕೆ ಅಕ್ರಮವಾಗಿ ಒಳನುಸುಳುವ ಕುಟುಂಬಗಳಿಂದ ಅವರ ಮಕ್ಕಳನ್ನು ಪ್ರತ್ಯೇಕಗೊಳಿಸುವ  ವಲಸೆನೀತಿಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌  ಬುಧವಾರ ಕೊನೆಗೊಳಿಸಿದ್ದಾರೆ.

ಓವಲ್ ಕಚೇರಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್  ಅವರು ವಲಸೆ ನೀತಿಯನ್ನು ಕೊನೆಗೊಳಿಸುವ ನಿರ್ಧಾರಕ್ಕೆ ಸಹಿ ಹಾಕಿ “ನಾನು ಇದನ್ನು ಒಂದು ಪ್ರಮುಖ ಕಾರ್ಯಕಾರಿ ಆದೇಶವೆಂದು ಪರಿಗಣಿಸುತ್ತೇನೆ " ಎಂದರು.

"ತಾನು   ಕುಟುಂಬಗಳನ್ನು ಬೇರ್ಪಡಿಸಲು ಇಷ್ಟಪಡುವುದಿಲ್ಲ" ಎಂದು ಟ್ರಂಪ್ ಹೇಳಿದ್ದಾರೆ.

ಅಕ್ರಮವಾಗಿ ಅಮೆರಿಕದೊಳಕ್ಕೆ ಪ್ರವೇಶಿಸುವ ಕುಟುಂಬದ ಹೆತ್ತವರಿಂದ  ಅವರ ಮಕ್ಕಳನ್ನು ಬೇರ್ಪಡಿಸುವ ಟ್ರಂಪ್‌ ವಲಸೆ ನೀತಿಯಿಂದ ಹಲವರು ಸಮಸ್ಯೆಗೆ ಸಿಲುಕಿದ್ದರು.

ಕಳೆದ ಎಪ್ರಿಲ್ 19ರಿಂದ ಮೇ 31ರ ಅವಧಿಯಲ್ಲಿ ಸುಮಾರು 2,000 ಮಕ್ಕಳು ಗಡಿಯಲ್ಲಿ ತಮ್ಮ ಹೆತ್ತವರಿಂದ ಬೇರ್ಪಟ್ಟಿದ್ದರು. ಟ್ರಂಪ್‌ ಅವರ  ಅಮಾನವೀಯ ವಲಸೆ ನೀತಿ ಬಗ್ಗೆ  ಸಾವ್ರತ್ರಿಕವಾಗಿ ಎಲ್ಲಡೆಯಿಂದ ಟೀಕೆ ವ್ಯಕ್ತವಾಗಿತ್ತು.

 ಈ  ಅಮಾನವೀಯ ವಲಸೆ ನೀತಿಯನ್ನು ಕೊನೆಗೊಳಿಸುವಂತೆ ಟ್ರಂಪ್‌ಗೆ  ಪುತ್ರಿ ಮತ್ತು ಸರಕಾರದ ಸಲಹೆಗಾರ್ತಿಯೂ ಆಗಿರುವ ಇವಾಂಕಾ ಟ್ರಂಪ್‌ ಅವರು ಒತ್ತಾಯಿಸಿದ್ದರು. ಇವಾಂಕಾ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ ಬೆನ್ನಲೇ ಟ್ರಂಪ್ ವಲಸೆ ನೀತಿಯನ್ನು ಕೊನೆಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ .

ಚುನಾವಣೆಪೂರ್ವದಲ್ಲಿ ನೀಡಿದ್ದ  ಭರವಸೆಯಂತೆ ಟ್ರಂಪ್‌ ಅವರು ಶೂನ್ಯ ಸಹಿಷ್ಣುತೆಯ ವಲಸೆ ನೀತಿಯೊಂದನ್ನು ಜಾರಿಗೆ ತಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News