ಕಡೂರು: ಸಾಮೂಹಿಕ ಯೋಗ ಪ್ರದರ್ಶನ ಕಾರ್ಯಕ್ರಮ

Update: 2018-06-21 15:13 GMT

ಕಡೂರು, ಜೂ.21: ಒತ್ತಡ ಜೀವನದ ನಡುವೆ ಮನುಷ್ಯ ಉತ್ತಮ ಆರೋಗ್ಯ ಪಡೆಯಲು ಯೋಗವನ್ನು ದೈನಂದಿನ ಕಾರ್ಯಚಟುವಟಿಕೆಯಾಗಿ ಅಳವಡಿಸಿಕೊಳ್ಳಬೇಕೆಂದು ಪಟ್ಟಣದ ಪತಂಜಲಿ ಯೋಗ ಕೇಂದ್ರದ ಅಧ್ಯಕ್ಷ ಬೆಂಕಿ ಶೇಖರಪ್ಪ ಯೋಗದ ತಿಳಿಸಿದರು.

ಅವರು ಗುರುವಾರ 4ನೇ ವಿಶ್ವಯೋಗ ದಿನದ ಅಂಗವಾಗಿ ಪತಾಂಜಲಿ ಯೋಗ ಕೇಂದ್ರ, ರಾಘವೇಂದ್ರ ಯೋಗ ಸಂಸ್ಥೆ ಹಾಗೂ ಕಡೂರು ಜೆಸಿಐ ಕಲ್ಪವೃಕ್ಷ ಮತ್ತು ಸ್ಥಳೀಯ ಸಂಘ, ಸಂಸ್ಥೆಗಳ ವತಿಯಿಂದ ಡಾ.ಆಂಬೇಡ್ಕರ್ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಸಾಮೂಹಿಕ ಯೋಗ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಶ್ವಕ್ಕೆ ಯೋಗ ಪ್ರಾಣಯಾಮ, ಧ್ಯಾನದ ಕೊಡುಗೆ ನೀಡಿದ ಹೆಮ್ಮೆ ಭಾರತಕ್ಕೆ ಸಲ್ಲುತ್ತದೆ. ಯೋಗ ಮನುಷ್ಯ ಜೀವನದ ಒಂದು ಭಾಗವಾಗಬೇಕು. ಯೋಗ ಮಾಡುವುದರಿಂದ ಸಧೃಡ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ರಾಘವೇಂದ್ರ ಯೋಗ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯರಾದ ಎಸ್.ವಿ.ವಿಜಯ ಗಿರೀಶ್ ಮಾತನಾಡಿ ಭಾರತೀಯ ಋಷಿ ಮುನಿಗಳ ತಪ್ಪಸ್ಸಿನ ಫಲ ಯೋಗ, ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇಂತಹ ಯೋಗಾಭ್ಯಾಸದಿಂದ ತನ್ನ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ. ಈ ನಿಟ್ಟನಲ್ಲಿ ಭಾರತವು ಅಂತರಾಷ್ಟ್ರೀಯ ಮನ್ನಣೆಗೆ ಪಾತ್ರವಾಗಿದೆ. ಇಡೀ ಪ್ರಪಂಚವೇ ಯೋಗ ಕಲೆಯನ್ನು ಸಂಭ್ರಮದಿಂದ ಬರಮಾಡಿಕೊಂಡು ಸತತ ನಾಲ್ಕು ವರ್ಷಗಳಿಂದ ಯೋಗ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.

ಯೋಗ ಶಿಕ್ಷಕ ಗಿರೀಶ್ ಯೋಗ ಪಟುಗಳನ್ನು ಉದ್ದೇಶಿಸಿ ಮನುಷ್ಯನ ಯಾಂತ್ರಿಕ ಜೀವನದಲ್ಲಿ ಸತತ ದಣಿವು, ಆಯಾಸ ಹೋಗಲಾಡಿಸಲು ಮತ್ತು ಅರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳನ್ನು ತಡೆಗಟ್ಟಲು ಯೋಗಾಸನವು ಉತ್ತಮ ಸಾಧನವಾಗಿದೆ. ಮಕ್ಕಳು ಸೇರಿದಂತೆ ಚಿಕ್ಕವಯಸ್ಸಿನಲ್ಲಿಯೇ  ಯೋಗಾಸನ ಅಳವಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಸಾಮೂಹಿಕ ಪ್ರದರ್ಶನದಲ್ಲಿ ಪುರಸಭೆ ಅದ್ಯಕ್ಷ ಎಂ.ಮಾದಪ್ಪ, ಡಾ.ಉಮೇಶ, ಡಾ.ದಿನೇಶ್, ಡಾ.ಪುರ್ಣಿಮ ದಿನೇಶ್, ಡಾ.ಕುಸುಮ, ಜಿ.ಪಂ. ಸದಸ್ಯ ಶರತ್ ಕೃಷ್ಣಮೂರ್ತಿ, ನರೇಂದ್ರನಾಥ್, ಮಂಗಳ, ಶಿವಕುಮಾರ್, ರಂಗರಾಬ್, ವಕೀಲ ಕೆ.ಜಿ.ಅಣ್ಣಪ್ಪ, ಕಡೂರು ಜೆಸಿಐ ಅಧ್ಯಕ್ಷ ಕೆ.ಎಸ್. ಸೋಮೇಶ್ ಶಿವಮೊಗ್ಗ  ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಶಾಲಾ ಮಕ್ಕಳು ಪಾಲ್ಗೊಂಡಿದ್ದರು.

ಬಿಇಒ ಕಚೇರಿಯ ದೈಹಿಕ ಶಿಕ್ಷಕ ರಂಗಸ್ವಾಮಿ, ಯೋಗ ಶಿಕ್ಷಕರಾದ ದರ್ಶನ್, ಪ್ರಕಾಶ್ ಮೂರ್ತಿ, ಬಸವರಾಜು ಯೋಗ ಪ್ರದರ್ಶನ ನಡೆಸಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News