ಹಾಸನ: ಜಿಲ್ಲಾ ಕ್ರೀಡಾಂಗಣದಲ್ಲಿ ವಿಶ್ವ ಯೋಗ ದಿನ ಆಚರಣೆ

Update: 2018-06-21 17:09 GMT

ಹಾಸನ,ಜೂ.21: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾರತ ಸರ್ಕಾರ, ಸಚಿವಾಲಯ, ಜಿಲ್ಲಾಡಳಿತ ಮತ್ತು ಆಯುಷ್ ಇಲಾಖೆ, ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ವಿಶ್ವ ಯೋಗ ದಿನ ಆಚರಣಾ ಸಮಿತಿ, ಪತಂಜಲಿ ಯೋಗಾ ಶಿಕ್ಷಣ ಸಮಿತಿ ಇವರ ಸಂಯುಕ್ತಾಶ್ತಯದಲ್ಲಿ ಗುರುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ವಿಶ್ವ ಯೋಗ ದಿನ ಆಚರಣೆಯಲ್ಲಿ ಸಾವಿರಾರು ಜನರು ಪಾಲ್ಗೊಂಡರು.

ಬೆಳಿಗ್ಗೆ 7 ಗಂಟೆಗೆ ಆರಂಭವಾದ ಯೋಗದಲ್ಲಿ ಜಿಲ್ಲಾಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸುದ್ದಿಮಾಧ್ಯಮದ ಪ್ರತಿನಿಧಿಗಳು, ಪೊಲೀಸ್ ಇಲಾಖೆ, ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ನಾನಾ ಪಕ್ಷದ ಮುಖಂಡರು ಹಾಗೂ ಸಾರ್ವಜನಿಕರು ಕೂಡ ಭಾಗವಹಿಸಿದರು.

ದೈಹಿಕ ಶಿಕ್ಷಣಾಧಿಕಾರಿ ವೆಂಕಟೇಶ್ ಮೂರ್ತಿ ವಿವಿಧ ಆಸನದ ಬಗ್ಗೆ ತಿಳಿಸಿದರು. ಪತಂಜಲಿ ಯೋಗ ಶಿಕ್ಷಕರು ಹಾಗೂ ಇತರರು ಸುಮಾರು ಒಂದು ಗಂಟೆಗಳ ಕಾಲ ಯೋಗಾಸನ ಹೇಳಿಕೊಟ್ಟರು. ಪತಂಜಲಿ ಯೋಗ ಸಮಿತಿ ಜಿಲ್ಲಾ ಪ್ರಭಾರಿ ಹರಿಹರಪುರ ಶ್ರೀಧರ್ ಪ್ರಾಸ್ತವಿಕವಾಗಿ ಯೋಗದ ಮಹತ್ವದ ಬಗ್ಗೆ ತಿಳಿಸಿಕೊಟ್ಟರು. ಭಾರತ್ ಸ್ವಾಭಿಮಾನ್ ಟ್ರಸ್ಟ್ ಜಿಲ್ಲಾ ಪ್ರಭಾರಿ ಶೇಷಪ್ಪ, ಹಿರಿಯ ಸದಸ್ಯರು ರಂಗನಾಥ್, ಯುವ ಭಾರತ್ ಜಿಲ್ಲಾ ಪ್ರಭಾರಿ ಸುರೇಶ್ ಪ್ರಜಾಪತಿ, ಖಜಾಂಚಿ ಗಿರೀಶ್, ಯುವ ಭಾರತ್ ಜಿಲ್ಲಾ ಸಹಪ್ರಭಾರಿ ಡಿ. ಮಂಜುನಾಥ್, ಪತಂಜಲಿ ಜಿಲ್ಲಾ ಸಹ ಪ್ರಭಾರಿ ದೊರೆಸ್ವಾಮಿ, ಜಿಲ್ಲಾ ಸಹಪ್ರಭಾರಿ ಪರಮೇಶ್, ರುಕ್ಮಿಣಿ ಸೇರಿದಂತೆ ಇತರರು ಯೋಗವನ್ನು ಹೇಳಿಕೊಟ್ಟರು.

ಕ್ಷೇತ್ರದ ಶಾಸಕ ಪ್ರೀತಮ್ ಜೆ. ಗೌಡ, ವಿಧಾನ ಪರಿಷತ್ತು ಸದಸ್ಯ ಗೋಪಾಲಸ್ವಾಮಿ, ಅಪರ ಜಿಲ್ಲಾಧಿಕಾರಿ ಪೂರ್ಣಿಮ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ವೇತ ದೇವರಾಜು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಗದೀಶ್, ಶ್ರೀ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ ಹಾಗೂ ಕಾಲೇಜ್ ಪ್ರಾಂಶುಪಾಲರು ಪ್ರಸನ್ನ ಎನ್. ರಾವ್, ಜಿಪಂ ಡಿಎಸ್ ನಾಗರಾಜು, ಕಸಾಪ ಜಿಲ್ಲಾಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಮಲೇರಿಯ ನಿಯಂತ್ರಣಾಧಿಕಾರಿ ರಾಜಗೋಪಾಲ್, ಡಿಹೆಚ್‍ಓ ಸತೀಶ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪದ್ಮ, ಸೇರಿದಂತೆ ಇತರರು ಯೋಗಾಸನದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News