ಮೈಸೂರು: ಬಸ್‍ನಿಂದ ಬಿದ್ದು ವ್ಯಕ್ತಿ ಮೃತ್ಯು
Update: 2018-06-22 22:19 IST
ಮೈಸೂರು,ಜೂ.22: ಬಸ್ ನಿಂದ ವ್ಯಕ್ತಿಯೋರ್ವರು ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ಮೈಸೂರು ತಾಲೂಕು ವರುಣಾ ಗ್ರಾಮದ ತಿರುವಿನಲ್ಲಿ ನಡೆದಿದೆ.
ಘಟನೆಯಲ್ಲಿ 5 ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡಿದ್ದು, ಮೈಸೂರು ತಾಲೂಕು ಭುಗತಹಳ್ಳಿ ಗ್ರಾಮದ ಚಿಕ್ಕಣ್ಣ (30 ) ಎಂಬವರೇ ಮೃತ ವ್ಯಕ್ತಿ. ಬಸ್ ಟಿ.ನರಸೀಪುರದಿಂದ ಮೈಸೂರಿಗೆ ಬರುತ್ತಿದ್ದ ವೇಳೆ ಅವಘಡ ಸಂಭವಿಸಿದ್ದು, ಖಾಸಗಿ ಬಸ್ ಚಾಲಕ ಘಟನೆ ನಡೆಯುತ್ತಲೇ ಸ್ಥಳದಿಂದ ಪರಾರಿಯಾಗಿದ್ದಾನೆ. ನಂತರ ಘಟನೆಗೆ ಖಾಸಗಿ ವಾಹನ ಸಿಬ್ಬಂದಿದ ಬೇಜವಾಬ್ದಾರಿ ಕಾರಣವೆಂದು ಆರೋಪಿಸಿ ಸ್ಥಳದಲ್ಲಿ ಬಸ್ ಪ್ರಯಾಣಿಕರು ಮತ್ತು ಗ್ರಾಮದವರು ಪ್ರತಿಭಟನೆ ನಡೆಸಿದರು. ಈ ಸಂಬಂಧ ವರುಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.