×
Ad

ಸಚಿವ ರಾಜಶೇಖರ್ ಪಾಟೀಲ್ ರಿಂದ ನಾಡ ಗೀತೆಗೆ ಅವಮಾನ: ವಿಡಿಯೋ ವೈರಲ್

Update: 2018-06-23 21:57 IST

ಬೀದರ್,ಜೂ.23: ಬೀದರ್ ನಲ್ಲಿ ನಡೆದ ಸಚಿವರ ಅಭಿನಂದನೆ ಕಾರ್ಯಕ್ರಮದಲ್ಲಿ ಸಚಿವ ರಾಜಶೇಖರ್ ಪಾಟೀಲ್ ನಾಡ ಗೀತೆಗೆ ಅವಮಾನ ಮಾಡಿದ್ದಾರೆ ಎನ್ನಲಾಗಿದ್ದು, ನಾಡ ಗೀತೆಗೆ ಅವಮಾನ ಮಾಡಿದ್ದಾರೆನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಗಣಿ ಮತ್ತು ಭೂ ವಿಜ್ಞಾನ ಹಾಗೂ ಮುಜರಾಯಿ ಇಲಾಖೆ ಸಚಿವರಾಗಿರುವ ರಾಜಶೇಖರ ಪಾಟೀಲ್ ಜೂನ್.17 ರಂದು ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ನಾಡ ಗೀತೆ ಹಾಡುತ್ತಿರುವ ಸಮಯದಲ್ಲೇ ಬೆಂಬಲಿಗರಿಗೆ ಕೈ ಕುಲುಕಿದ್ದಾರೆ ಎನ್ನಲಾಗಿದೆ. ಸಚಿವರ ವರ್ತನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News