ಮೂಡಿಗೆರೆಯ ಅಂದ ವಿದ್ಯಾರ್ಥಿ ರಂಜಿತ್ ರೆಬೆಲ್ಲೋ ಮಂಡಿಸಿದ ಪ್ರಬಂಧಕ್ಕೆ ಪಿಎಚ್‍ಡಿ ಪದವಿ

Update: 2018-06-24 16:22 GMT

ಮೂಡಿಗೆರೆ, ಜೂ.24: ದಿಲ್ಲಿಯ ನೆಹರು ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಪೂರೈಸಿರುವ ರಂಜಿತ್ ರೆಬೆಲ್ಲೋ ಅವರು ಮಂಡಿಸಿದ ಪ್ರಬಂಧಕ್ಕೆ ವಿಶ್ವವಿದ್ಯಾಲಯವು ಪಿಎಚ್‍ಡಿ ಪದವಿ ನೀಡಿದೆ. 

ಭಾರತ ಮತ್ತು ಕುವೈತ್ ದೇಶಗಳ ನಡುವಿನ ರಾಜಕೀಯ ಮತ್ತು ಸಾಂಸ್ಕೃತಿಕ ಸಂಬಂಧಗಳು (Political and Cultural aspects of India's relationship with Kuwait 1990-2000)  ಎಂಬ ವಿಷಯದ ಮೇಲೆ ರಂಜಿತ್ ರೆಬೆಲ್ಲೋ ಪ್ರಬಂಧ ಮಂಡಿಸಿದ್ದರು. 

ಆತ್ಮವಿಶ್ವಾಸ ಮತ್ತು ಛಲದ ಮುಂದೆ ಯಾವ ನ್ಯೂನತೆಗಳು ಅಡ್ಡಿಯಾಗಲಾರವು ಎಂಬುದಕ್ಕೆ ಜ್ವಲಂತ ಉದಾಹರಣೆಯಾಗಿ ಹುಟ್ಟಿನಿಂದ ಅಂಧರಾಗಿರುವ ರಂಜಿತ್ ಶೈಕ್ಷಣಿಕವಾಗಿ ಉನ್ನತ ಸಾಧನೆ ಮಾಡಿದ್ದಾರೆ. 

ಮೂಡಿಗೆರೆ ತಾಲೂಕಿನ ಕಮ್ಮರಗೋಡಿನ ಸಿರಿಲ್ ರೆಬೆಲ್ಲೋ ದಂಪತಿಗಳ ಪುತ್ರರಾದ ರಂಜಿತ್ ರೆಬೆಲ್ಲೋ ಮೂಡಿಗೆರೆ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಪಿ.ಯು.ಸಿ. ವ್ಯಾಸಂಗ ಮಾಡಿ ಹಂತಹಂತವಾಗಿ ವ್ಯಾಸಂಗ ಮುಂದುವರಿಸಿ ಇದೀಗ ಪ್ರತಿಷ್ಠಿತ ದೆಹಲಿಯ ಜವರಹಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ಪಿಎಚ್‍ಡಿ ಪಡೆದು ಸಾಧನೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News