ಹನೂರು: ಕಾನೂನು ಅರಿವು ಕಾರ್ಯಕ್ರಮ

Update: 2018-06-24 16:52 GMT

ಹನೂರು,ಜೂ.24: ಪ್ರತಿಯೊಬ್ಬರಲ್ಲೂ ಕಾನೂನಿನ ಅರಿವು ಮೂಡಿದಾಗ ಅಪರಾಧಗಳ ಸಂಖ್ಯೆ ಕಡಿಮೆಯಾಗಿ ಸ್ವಾಸ್ಥ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾದೀಶ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರಾದ ಎಸ್.ಜೆ ಕೃಷ್ಣ ಅಭಿಪ್ರಾಯಪಟ್ಟರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಚಾಮರಾಜನಗರ, ತಾಲೂಕು ಸೇವೆಗಳ ಸಮಿತಿ ವಕೀಲರ ಸಂಘ, ಅಭಿಯೋಜನಾ ಇಲಾಖೆ, ತಾಲೂಕು ಸಮಾಜ ಕಲ್ಯಾಣ ಇಲಾಖೆ, ತಾ.ಪಂ ಪೋಲಿಸ್ ಇಲಾಖೆ, ತಾಲೂಕು ಆಡಳಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಕೊಳ್ಳೇಗಾಲ ಇವರ ಸಹಯೋಗದೂಂದಿಗೆ ಹೂಗ್ಯಂ ಗ್ರಾಮದಲ್ಲಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ  ಭಾಗದಲ್ಲಿ ಅಸ್ಪೃಶ್ಯತೆ ಕಂಡು ಬಂದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿಯನ್ನು ಸಂಪರ್ಕಿಸಬೇಕು ಮತ್ತು ಇಲಾಖೆಗಳು ಮತ್ತು ಕಾನೂನು ಸೇವೆಗಳ ವತಿಯಿಂದ ಆಯೋಜಿಸುವ ಕಾನೂನು ಅರಿವು ಕಾರ್ಯಕ್ರಮಗಳಲ್ಲಿ ಸಮಾಜದ ಸರ್ವರೂ ಸಹ ಭಾಗವಹಿಸುವುದರೂಂದಿಗೆ ಪ್ರತಿಯೊಬ್ಬರೂ ಕಾನೂನಿನ ಬಗ್ಗೆ ಜ್ಞಾನ ಅರಿತು ನಂತರ ಸಾಮಾಜಿಕ ವ್ಯವಸ್ಥೆಯನ್ನು ಬಲಗೂಳಿಸುವ ನಿಟ್ಟಿನಲ್ಲಿ ಮಾನವೀಯ ಮೌಲ್ಯಗಳನ್ನು ರೂಡಿಗೂಳಿಸಸಿ, ಆಸಕ್ತರು ದುರ್ಬಲರಿಗೆ ನೆರವಾಗಬೇಕು ಎಂದರು 

ಚಾಮರಾಜನಗರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಸಿ.ಜಿ ವಿಶಾಲಕ್ಷಮ್ಮ, ಮಾತನಾಡಿ ಮಹಿಳೆಯರು ಶೋಷಣೆಯಿಂದ  ಮುಕ್ತರಾಗಲು ಹಾಗೂ ಬದುಕಿನಲ್ಲಿ ಎದುರಾಗುವ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಕಾನೂನನ ಅರಿವು ಅವಶ್ಯಕವಾಗಿದೆ. ದೇಶದ ಅಭಿವೃದ್ದಿಯಲ್ಲಿ ಮಹಿಳೆಯರ ಪಾತ್ರ ಹಿರಿದು. ತಾಲೂಕು ಕಾನೂನು ಸೇವೆಗಳ ಸಮಿತಿಯಿಂದ ದೊರೆಯುವ ಕಾನೂನು ಅರಿವು ಮತ್ತು ನೆರವನ್ನು ಉಪಯೋಗಿಸಿಕೂಳ್ಳಬೇಕು ಎಂದು ತಿಳಿಸಿದರು  

ಈ ಸಂದರ್ಭ ತಹಶೀಲ್ದಾರ್ ಕಾಮಾಕ್ಷಮ್ಮ, ವಿಶೇಷ ತಹಶೀಲ್ದಾರ್ ಮಹದೇವಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಮಂಜುಳಾ, ತಾಲೂಕು ವಕೀಲರ ಸಂಘದ ಕಾರ್ಯದರ್ಶಿ ಬಸವರಾಜು, ವಕೀಲರಾದ ವೆಂಕಟಚಾಲ, ನಾಗರಾಜು, ಚಂದ್ರಶೇಖರ್, ವೃತ್ತ ನಿರೀಕ್ಷಕರಾದ ಪರಶುರಾಮ್ ಹೂಗ್ಯಂ ಗ್ರಾಪಂ ಕಾರ್ಯದರ್ಶಿ ರಾಜಣ್ಣ ಇನ್ನಿತರರು ಹಾಜರಿದ್ದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News