ಹಿಂಭಡ್ತಿ ತಪ್ಪಿಸಲು ಹೊಸ ಕಾಯ್ದೆ ಜಾರಿಗೆ

Update: 2018-06-24 16:55 GMT

ಬೆಂಗಳೂರು, ಜೂ.24: ಬಡ್ತಿ ಮೀಸಲು ಕಾಯ್ದೆ ರದ್ದುಪಡಿಸಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪು ಅನುಷ್ಠಾನದಿಂದ ಹಿಂಬಡ್ತಿಯ ಭೀತಿ ಎದುರಿಸುತ್ತಿದ್ದ ಪರಿಶಿಷ್ಟ ಸಮುದಾಯದ ನೌಕರರ ಹಿತ ಕಾಪಾಡಲು ರಾಜ್ಯ ಸರಕಾರ ರೂಪಿಸಿದ ಮಸೂದೆ ಕಾಯ್ದೆಯಾಗಿ ಜಾರಿಗೆ ಬಂದಿದೆ.

ಹಿಂಬಡ್ತಿ ಪಡೆಯುವ ನೌಕರರಿಗೆ ಸೂಪರ್ ನ್ಯೂಮರರಿ(ಸಂಖ್ಯಾಧಿಕ) ಹುದ್ದೆ ಸೃಷ್ಟಿಸಿ, ಅದೇ ಹುದ್ದೆಯಲ್ಲಿ ಮುಂದುವರೆಯಲು ಹೊಸ ಕಾಯ್ದೆ ಅವಕಾಶ ಕಲ್ಪಿಸಿದೆ. ಬಡ್ತಿ ಮೀಸಲು ಕಾಯ್ದೆ-2002 ಅನ್ನು ರದ್ದುಪಡಿಸಿ, ಸುಪ್ರೀಂ ಕೋರ್ಟ್ 2017 ಫೆ.9ರಂದು ನೀಡಿದ್ದ ಆದೇಶ ನೀಡಿತ್ತು. ಆದರೆ, ಈ ನೌಕರರ ಹಿತ ಕಾಪಾಡಲು ರಾಜ್ಯ ಸರಕಾರ ರಚಿಸಿದ್ದ ಮಸೂದೆಗೆ ರಾಷ್ಟ್ರಪತಿ ಈಚೆಗೆ ಹಂಕಿತ ಹಾಕಿದ್ದರು.

ರಾಜ್ಯ ಸರಕಾರ ರಚಿಸಿರುವ ಹೊಸ ಕಾಯ್ದೆಯಲ್ಲಿ 1978ರ ಎ.27ರ ನಂತರ ಈಗಾಗಲೆ ನೀಡಲಾಗಿರುವ ತತ್ಪರಿಣಾಮ ಜ್ಯೇಷ್ಠತೆ ಸಂರಕ್ಷಿಸಲು ಮತ್ತು 1995ರ ಜೂನ್ 17ರಿಂದ ಪೂರ್ವಾನ್ವಯವಾಗುವಂತೆ ಮೀಸಲಾತಿ ಆಧಾರದಲ್ಲಿ ಬಡ್ತಿ ಹೊಂದಿರುವ ನೌಕರರಿಗೆ ತತ್ಪರಿಣಾಮ ಜ್ಯೇಷ್ಠತೆ ವಿಸ್ತರಿಸಲು ಅವಕಾಶ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News