ಡಾ.ಎಸ್.ಎಲ್ ಭೈರಪ್ಪ ಕಪಟ ಸಾಹಿತಿ: ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ್

Update: 2018-06-24 17:11 GMT

ದಾವಣಗೆರೆ,ಜೂ.24: ಪ್ರಧಾನಮಂತ್ರಿ ಮೋದಿ ಅವರು ಪುನ: ಪ್ರಧಾನಿಯಾಗದಿದ್ದರೆ ದೇಶಕ್ಕೆ ಉಳಿಗಾಲವಿಲ್ಲವೆಂದು ಹೇಳಿಕೆ ನೀಡಿರುವ ಸಾಹಿತಿ ಡಾ.ಎಸ್. ಎಲ್. ಭೈರಪ್ಪನವರು ಒಬ್ಬ ಕೋಮುವಾದಿ. ಅವರೊಬ್ಬ ಕಪಟ ಸಾಹಿತಿ ಎಂದು ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ ತೀವ್ರವಾಗಿ ಟೀಕಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಡಾ.ಎಸ್.ಎಲ್. ಭೈರಪ್ಪನವರಿಗೆ ಅಭಿಮಾನವಿದ್ದರೆ ಮೋದಿಯವರನ್ನು ಬೆಂಬಲಿಸಲಿ. ಆದರೆ, ಮೋದಿ ಅಧಿಕಾರಕ್ಕೆ ಬರದೇ ಹೋದರೆ ದೇಶಕ್ಕೆ ಉಳಿಗಾಲವಿಲ್ಲ ಎಂದು ಹೇಳಿಕೆ ನೀಡುವ ಮೂಲಕ ದೇಶದ ಸಂವಿಧಾನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕ ತಂದಿದ್ದಾರೆ. ದೇಶದ ನೇತೃತ್ವ ವಹಿಸಲು ಯಾರೊಬ್ಬರೂ ಅನಿವಾರ್ಯವಲ್ಲ. ಏಕೆಂದರೆ ಡಾ.ಅಂಬೇಡ್ಕರ್ ಬರೆದ ಸಂವಿಧಾನಕ್ಕೆ ಅಷ್ಟೊಂದು ಶಕ್ತಿ ಇದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಡಾ.ಎಸ್.ಎಲ್. ಭೈರಪ್ಪನವರಿಗೆ ಮೋದಿ ಆಡಳಿತದಲ್ಲಿ ನೋಟು ಅಮಾನ್ಯಕರಣದಿಂದ ದೇಶದ ಆರ್ಥಿಕತೆಗೆ ಆದ ತೊಂದರೆ, ರಾಫೇಲ್ ಯುದ್ದ ವಿಮಾನ ಖರೀದಿಯಲ್ಲಿ ಮೋದಿ ಭ್ರಷ್ಟಾಚಾರ ,ಮೋದಿ ಪರಮಾಪ್ತ ಮಿತ್ರರ ಬ್ಯಾಂಕ್ ಹಗರಣಗಳು ಹಾಗೂ ಬೆಲೆ ಏರಿಕೆಯ ಬಗ್ಗೆ ಅರಿವಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಬೈರಪ್ಪನವರು ಮೊದಲಿನಿಂದಲೂ ಸಂಘ ಪರಿಹಾರ ಆರೆಸ್ಸಸನ್ನು ಬೆಂಬಲಿಸುವ ಒಬ್ಬ ಕೋಮುವಾದಿಯಾಗಿದ್ದಾರೆ. ಇಂತವರಿಂದ ಕನ್ನಡ ಸರಸ್ವತಾ ಲೋಕಕ್ಕೆ ಕಳಂಕವೆಂದು ಡಿ.ಬಸವರಾಜ ತೀವ್ರ ವಾಗ್ದಾಳಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News