ಮಂಡ್ಯ: ಸ್ಕೂಟರ್ ಗೆ ಟಿಪ್ಪರ್ ಢಿಕ್ಕಿ; ಪತ್ನಿ ಮೃತ್ಯು, ಪತಿ ಗಂಭೀರ

Update: 2018-06-24 17:15 GMT

ಮಂಡ್ಯ, ಜೂ.24: ಸ್ಕೂಟರ್ ಗೆ ಟಿಪ್ಪರ್ ಢಿಕ್ಕಿಯಾಗಿ ಪತ್ನಿ ಸ್ಥಳದಲ್ಲೇ ಮೃತಪಟ್ಟು, ಪತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಕಡಿಲುವಾಗಿಲು ಬಳಿ ರವಿವಾರ ಬೆಳಗ್ಗೆ ನಡೆದಿದೆ.

ಮಂಡ್ಯ ನಗರದ ಗುತ್ತಲು ಬಡಾವಣೆಯ ನಿವಾಸಿ ಭಾಗ್ಯಮ್ಮ(55) ಮೃತಪಟ್ಟಿದ್ದು, ತೀವ್ರವಾಗಿ ಗಾಯಗೊಂಡಿರುವ ಆಕೆಯ ಪತಿ ಜಿ.ಡಿ.ಚನ್ನಯ್ಯ ಅವರನ್ನು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.

ಪತಿ-ಪತ್ನಿ ಚಿಕ್ಕರಸಿನಕೆರೆ ಗ್ರಾಮಕ್ಕೆ ಕಾರ್ಯನಿಮಿತ್ತ ಹೋಂಡಾ ಆಕ್ಟೀವ ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ ಹಿಂದಿನಿಂದ ಬಂದ ಟಿಪ್ಪರ್ ಢಿಕ್ಕಿಯಾಗಿದೆ. ಈ ವೇಳೆ ಕೆಳಕ್ಕೆ ಬಿದ್ದ ಭಾಗ್ಯಮ್ಮಳ ಮೇಲೆ ಟಿಪ್ಪರ್ ಹರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News