ಮಡಿಕೇರಿ: ಶಿಕ್ಷಕಿ ಕವಿತಾ ಮನೋಜ್‍ಗೆ ಪಿ.ಎಚ್.ಡಿ ಪದವಿ

Update: 2018-06-24 18:11 GMT

ಮಡಿಕೇರಿ, ಜೂ.24: ವಿರಾಜಪೇಟೆ ಸಂತ ಅನ್ನಮ್ಮ ಪ್ರೌಢಶಾಲೆಯ ಶಿಕ್ಷಕಿ ಕವಿತಾ ಮನೋಜ್ ಅವರು ಮಂಡಿಸಿದ ‘ಮಕ್ಕಳ ವಿಶೇಷ ಶಿಕ್ಷಣ’ ಎಂಬ ಪ್ರಬಂಧಕ್ಕೆ ಧಾರವಾಡ ವಿಶ್ವವಿದ್ಯಾಲಯ ಪಿ.ಎಚ್.ಡಿ ಪದವಿ ನೀಡಿ ಗೌರವಿಸಿದೆ. 

ಕವಿತಾ ಮನೋಜ್ ಅವರಿಗೆ ಇತ್ತೀಚೆಗೆ ವಿಶ್ವವಿದ್ಯಾಲಯ ಎಸ್.ಎ.ಎಸ್ ರಾವ್ ಸಭಾಂಗಣದಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ಉಪ ಕುಲಪತಿ ರಾಜರಾಜೇಶ್ವರಿ ಮಹೇಶ್ ಅವರು ಪಿ.ಎಚ್.ಡಿ ಪದವಿ ಪ್ರದಾನ  ಮಾಡಿದರು. ಕವಿತಾ ಮನೋಜ್ ಅವರು ಪ್ರೊ.ಕೆ.ಆರ್.ರವಿಕುಮಾರ್ ಅವರ ಮಾರ್ಗದರ್ಶನದಲ್ಲಿ ಪ್ರಬಂಧ ಬರೆದಿದ್ದರು.

ಕವಿತಾ ಮನೋಜ್ ಅವರು ವೀರಾಜಪೇಟೆಯ ನಿಸರ್ಗ ಬಡಾವಣೆಯ ಉದ್ಯಮಿ ಎ.ಮನೋಜ್ ಅವರ ಪತ್ನಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News