ಸೌದಿ: ಚಾಲಕಿಯರ ಜಮಾನಾ ಶುರು
Update: 2018-06-24 23:41 IST
ಸೌದಿ ಅರೇಬಿಯದ ಮಹಿಳೆಯರು ರವಿವಾರ ಬೆಳಗ್ಗೆಯಾಗುವವರೆಗೂ ಕಾಯಲಿಲ್ಲ! ಶನಿವಾರ ಮಧ್ಯರಾತ್ರಿ ಕಳೆಯುತ್ತಿದ್ದಂತೆಯೇ ಅವರು ತಮ್ಮ ಕಾರುಗಳೊಂದಿಗೆ ರಸ್ತೆಗಿಳಿದರು ಹಾಗೂ ಆ ಮೂಲಕ ದಾಖಲೆ ಪುಸ್ತಕಗಳಿಗೆ ಸೇರ್ಪಡೆಗೊಂಡರು. ರವಿವಾರ ಸೌದಿ ಮಹಿಳೆಯರ ಮೇಲಿದ್ದ 35 ವರ್ಷಗಳ ವಾಹನ ಚಾಲನೆ ನಿಷೇಧ ಕೊನೆಗೊಂಡಿತು. ಶನಿವಾರ ಮಧ್ಯರಾತ್ರಿ 12 ಗಂಟೆ ಬಾರಿಸುತ್ತಿದ್ದಂತೆಯೇ, ಹಲವಾರು ಮಹಿಳೆಯರು ತಮ್ಮ ನೂತನ ವಾಹನ ಚಾಲನಾ ಪರವಾನಿಗೆಗಳೊಂದಿಗೆ ರಾಜಧಾನಿ ರಿಯಾದ್‌ನ ನಿಬಿಡ ತಹ್ಲಿಯ ರಸ್ತೆ ಹಾಗೂ ಇತರ ರಸ್ತೆಗಳಲ್ಲಿ ಕಾರುಗಳನ್ನು ಚಲಾಯಿಸಿದರು.