ಜನರ ಸೇವೆ ನನ್ನ ಮೊದಲ ಆದ್ಯತೆ: ಶಾಸಕ ಟಿ.ಡಿ.ರಾಜೇಗೌಡ

Update: 2018-06-24 18:23 GMT

ಎನ್.ಆರ್.ಪುರ, ಜೂ.24: ಹಲವು ವರ್ಷಗಳಿಂದ ಕೃಷಿ ಇಲಾಖೆಗೆ ಸೆರಿದ ಜಾಗ ಸಂಬಂಧ ಖಾಸಗಿ ವ್ಯಕ್ತಿ ಜೇಕಬ್ ಎಂಬವರ ನಡುವೆ ಇದ್ದ ಸಮಸ್ಯೆ ಪರಿಹಾರಕ್ಕೆ ಕೃಷಿ, ಸಮಾಜ ಕಲ್ಯಾಣ ಇಲಾಖೆಗಳ ಅಧಿಕಾರಿಗಳ ಸಮಕ್ಷಮದಲ್ಲಿ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಸ್ಥಳ ಪರಿಶೀಲನೆಯನ್ನು ನಡೆಸಿದ ಶಾಸಕ ಟಿ.ಡಿ.ರಾಜೇಗೌಡ ಸಮಸ್ಯೆಯನ್ನು ಸರಳವಾಗಿ ಪರಿಹರಿಸಿ ಕಟ್ಟಡಗಳ ನಿರ್ಮಾಣಕ್ಕೆ ಹಸಿರು ನಿಶಾನೆ ನೀಡಿದರು.

ಅಧಿಕಾರಿಗಳಿಗೆ ಮತ್ತು ಗುತ್ತಿಗೆ ದಾರರಿಗೆ ಹೆಣ್ಣು ಮಕ್ಕಳ ಹಾಸ್ಟೆಲ್ ನಿರ್ಮಾಣ ಬಹಳ ಬೇಗ ಹಾಗು ಉತ್ತಮ ರೀತುಯಲ್ಲಿ ನಿರ್ಮಾಣವಾಗಬೇಕು. ಅದರಂತೆ ಕೃಷಿ ಇಲಾಖಾ ಕಟ್ಟಡವೂ ಸಮರ್ಪಕ ಗೋಡನ್ ಸಹಿತ ನಿರ್ಮಾಣವಾಗಲಿ ಎಂದು ಸೂಚಿಸಿದರು. ಹಾಗೇ ಕಟ್ಟಡ ನಿರ್ಮಾಣಕ್ಕೆ ತೊಡಕಾಗಿರುವ ವಿದ್ಯುತ್ ಲೈನನ್ನು ಬದಲಾಯಿಸಿ ಸಹಕರಿಸಲು ಮೆಸ್ಕಾಂ ಇಂಜಿನಿಯರಿಗೆ ಸೂಚಿಸಿದರು.

ಇವೆಲ್ಲ ನಡದ ನಂತರ ತಹಸಿಲ್ದಾರ್ ಕಛೇರಿಯಲ್ಲಿ ನಡೆಸಿದ ಸಭೆಯಲ್ಲಿ ಅಧಿಕಾರಿಗಳಿಗೆ ವಿಶೇಷ ಸಲಹೆ ಸೂಚನೆ ನೀಡಿದರು ನಂತರ ಪತ್ರಕರ್ತರೊಂದಿಗೆ ಮಾತನಾಡಿ ಕೃಷಿ ಇಲಾಖೆಯ ಸಮಸ್ಯೆ ನನ್ನ ಗಮನಕ್ಕೆ ತಂದ ಮಾದ್ಯಕಗಳಿಗೆ ಇದನ್ನು ಬಗೆ ಹರಿಸಲು ಸಹಕರಿಸಿದ ಕೃಷಿ ಸಮಾಜಕ್ಕೆ,ಖಾಸಗಿ ವ್ಯಕ್ತಿಗಳಿಗೆ ಜೊತೆಗೆ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುವುದರ ಜೊತೆಗೆ ಹಿಂದಿನ ಸರ್ಕಾರದಲ್ಲಿನ ಸಚಿವ ಆಂಜನೇಯ ಮತ್ತು ಸಿದ್ದರಾಮಯ್ಯರವರು ನೀಡಿದ ಅನುದಾನದ ಜೊತೆಗೆ ಅದಕ್ಕಾಗಿ ಶ್ರಮಿಸಿದ ಮಾಜಿ ಸಾಸಕ ಜೀವರಾಜ್ ಗೂ ಸೇರಿಸಿ ಧನ್ಯವಾದ ತಿಳಿಸಿದರು.

ಹಾಸ್ಟೆಲ್ ಗೆ ಭೇಟಿ ನಿಡಿದ್ದು ಉತ್ತಮ ನಿರ್ವಹಣೆ ಇದ್ದರೂ ಕೆಲವು ಅವಶ್ಯಕತೆಗಳು ಗಮನಕ್ಕೆ ಬಂದಿದ್ದು, ಹಣದ ಕೊರತೆಯಾದಲ್ಲಿ ಶಾಸಕರ ನಿಧಿಯಿಂದ ಒದಗಿಸಲಾಗುವುದೆಂದು ಭರವಸೆ ನೀಡಿ ಮಕ್ಕಳ ಬಳಕೆಗೆ ಸಿದ್ದವಾಗುತ್ತಿರುವ ಶೌಚಾಲಯದ ಕಾಮಗಾರಿ ತ್ವರಿತ ಮುಗಿಸಲು ಸೂಚಿಸಿರುವುದಾಗಿ ತಿಳಿಸಿದರು. ಹಾಗೇ ತಮ್ಮ ಭೇಟಿಗೆ ಇತರೆ ಜನರ ಸಮಸ್ಯೆ ಆಲಿಸಲು ಇರುವ ಶಾಸಕರ ಕಚೇರಿ ಸದ್ಯಕ್ಕೆ ಸೋರುತ್ತಿದ್ದು ಅದನ್ನು ಬೇಗ ಸರಿಪಡಿಸಿ ಪ್ರಾರಂಭ ಮಾಡಲಾಗುವುದು. ಜನರ ಸೇವೆ ನನ್ನ ಮೊದಲ ಆದ್ಯತೆ ಎಂದರು. ಬಸ್ಟ್ಯಾಂಡ್ ಬಳಿಯಲ್ಲಿನ ಶೌಚಾಲಯದ ದುರ್ವಾಸನೆ ಬಗ್ಗೆ ಇರುವ ದೂರು ಹಾಗೂ ಸಾರ್ವಜನಿಕ ದ್ವಿಚಕ್ರ ವಾಹನದ ನಿಲುಗಡೆ ಬಗ್ಗೆ ಇರುವ ದೂರಿನ ಬಗ್ಗೆ ಗಮನ ಹರಿಸುತ್ತಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸದಾಶಿವರವರು ಬಿಸಿಎಂ ಹಾಸ್ಟೆಲ್ ಅಧಿಕಾರಿಗೆ ಕೆಲವು ಸೂಚನೆಗಳನ್ನು ನೀಡಿದರು.ತಹಶೀಲ್ದಾರ್ ಗೋಪಿನಾಥ್, ಕೃಷಿಕ ಸಮಾಜದ ಅಧ್ಯಕ್ಷ ನೀಲೇಶ್, ಸುಂದರೇಶ್ ಕೆ.ಎಂ.ಗಂಗಾಧರ್,ಮನು,ಮೇಘ,ಪ್ರಶಾಂತ್ ಶೆಟ್ಟಿ, ಮಹೇಶ್, ಉಪೇಂದ್ರ,ಜೋಯಿ, ಸಿಜ್ಜು, ವೆಂಕಟೇಶ್, ಬೆನ್ನಿ, ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News