ಮದ್ದೂರು: ಬೆಳೆ ಪದ್ಧತಿ ಬದಲಾವಣೆ ಸೂಚನೆ ಖಂಡಿಸಿ ವಕೀಲರಿಂದ ಕಲಾಪ ಬಹಿಷ್ಕಾರ

Update: 2018-06-25 17:09 GMT

ಮಂಡ್ಯ, ಜೂ.25: ಕೇಂದ್ರ ಸರಕಾರ ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡಿ ಕರ್ನಾಟಕದವರು ಬೆಳೆ ಪದ್ದತಿಯನ್ನು ಬದಲಾಯಿಸಬೇಕೆಂದು ಸೂಚಿಸಿರುವುದು ಸರಿಯಲ್ಲ ಎಂದು ಆರೋಪಿಸಿ ವಕೀಲರು ಸೋಮವಾರ ಮದ್ದೂರಿನಲ್ಲಿ ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ವಕೀಲರ ಸಂಘದ ಅಧ್ಯಕ್ಷ ಸತ್ಯಪ್ಪ ಮಾತನಾಡಿ, ಬೆಳೆ ಪದ್ದತಿ ಬಗ್ಗೆ ನಿರ್ಧಾರ ಮಾಡುವವರು ಆ ಭಾಗದ ರೈತರೇ ಹೊರತು ಸಮಿತಿಯಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಕೂಡಲೇ ಬೆಳೆ ಪದ್ದತಿ ಬಗ್ಗೆ ಕಾವೇರಿ ನಿರ್ವಹಣಾ ಮಂಡಳಿ ಪ್ರಸ್ತಾಪ ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಕೃಷಿ ವಿಜ್ಞಾನ ಕೇಂದ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರ ಖಾಸಗಿಕರಣಗೊಳಿಸುವುದು ಸರಿಯಲ್ಲ. ರಾಜ್ಯ ಸರಕಾರ ಕಾವೇರಿ ನಿರ್ವಹಣಾ ಮಂಡಳಿಗೆ ತನ್ನ ಸದಸ್ಯರನ್ನು ನೇಮಿಸಲು ವಿಳಂಬ ಮಾಡದೆ, ಕೂಡಲೇ ಕೇಂದ್ರ ಸರಕಾರಕ್ಕೆ ತನ್ನ ಪಟ್ಟಿಯನ್ನು ಸಲ್ಲಿಸಬೇಕು ಎಂದು ಅವರು ತಾಕೀತು ಮಾಡಿದರು.

ವಕೀಲರಾದ ಶಿವಣ್ಣ, ಸಂಪತ್‍ಕುಮಾರ್, ಲೋಕೇಶ್, ಮಹೇಶ್, ಶೇಖರ್, ಕೆಂಪೇಗೌಡ, ಮಹೇಶ್, ವೆಂಕಟೇಶ್ ಇನ್ನಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News