ರಾಮನಗರ: ಶಾಲಾ ಕೊಠಡಿಯಲ್ಲಿ ಪ್ರತ್ಯಕ್ಷವಾದ ನಾಗರಹಾವು

Update: 2018-06-25 18:27 GMT

ರಾಮನಗರ,ಜೂ.25: ತಾಲೂಕಿನ ಕವಣಾಪುರ ಸರ್ಕಾರಿ ಶಾಲೆಯ ಕೊಠಡಿಯಲ್ಲಿ 7 ಅಡಿ ಉದ್ದದ ಗೋದಿ ನಾಗರಹಾವು ಪತ್ತೆಯಾದ ಘಟನೆ ನಡೆದಿದೆ.

ತರಗತಿಯಲ್ಲಿ ಮಕ್ಕಳ ಪಾಠ ಪ್ರಾರಂಭವಾಗುತ್ತಿದ್ದಂತೆ ಪ್ರತ್ಯಕ್ಷಗೊಂಡ ಹಾವು, ಕೆಲಕಾಲ ಆತಂಕ ಸೃಷ್ಟಿಸಿತು. 11 ಜನ ಮಕ್ಕಳಿದ್ದ ಶಾಲಾ ಕೊಠಡಿಯ ಕಬೋರ್ಡ್ ನಲ್ಲಿ ಸೇರಿಕೊಂಡಿದ್ದ ಹಾವನ್ನು ಕಂಡು ತಕ್ಷಣ ಹಾವು ಹಿಡಿಯುವ ವ್ಯಕ್ತಿಯನ್ನು ಕರೆಸಲಾಯಿತು. ನಂತರ ಹಾವನ್ನು ಹಿಡಿದು ಅರಣ್ಯ ಇಲಾಖೆಯ ಸಿಬ್ಬಂದಿಗೆ ಒಪ್ಪಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News