ಪಕ್ಷದ ಹಿರಿಯ ನಾಯಕರ ಸೂಚನೆಯಂತೆ ಪೊಲೀಸರಿಂದ ಕಿರುಕುಳ: ಸದನದಲ್ಲಿ ಕಣ್ಣೀರಿಟ್ಟ ಬಿಜೆಪಿ ಶಾಸಕಿ

Update: 2018-06-26 14:52 GMT

ಭೋಪಾಲ,ಜೂ.26: ತನ್ನದೇ ಪಕ್ಷದ ಹಿರಿಯ ನಾಯಕರೋರ್ವರ ಸೂಚನೆಯ ಮೇರೆಗೆ ಪೊಲೀಸರು ತನಗೆ ಮತ್ತು ತನ್ನ ಕುಟುಂಬ ಸದಸ್ಯರಿಗೆ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ರೇವಾ ಜಿಲ್ಲೆಯ ಸಿಮರಿಯಾ ಕ್ಷೇತ್ರದ ಬಿಜೆಪಿ ಶಾಸಕಿ ನೀಲಂ ಅಭಯ ಮಿಶ್ರಾ ಅವರು ಮಂಗಳವಾರ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಕಣ್ಣೀರು ಹಾಕಿದರು.

ಶೂನ್ಯವೇಳೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿದ ಮಿಶ್ರಾ,ರೇವಾ ಜಿಲ್ಲಾ ಪೊಲೀಸರು ತನ್ನನ್ನು ಮತ್ತು ತನ್ನ ಕುಟುಂಬದ ಸದಸ್ಯರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ,ರಕ್ಷಣೆಯನ್ನೊದಗಿಸುವಂತೆ ಕೋರಿದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಾನು ಸ್ಪರ್ಧಿಸುವುದಿಲ್ಲ ಎಂದು ಅವರು ತಿಳಿಸಿದರು.

ಮಿಶ್ರಾರನ್ನು ಬೆಂಬಲಿಸಿದ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು, ಆಡಳಿತ ಪಕ್ಷದ ಶಾಸಕಿಯೇ ಅಸಹಾಯಕ ಸ್ಥಿತಿ ಅನುಭವಿಸುತ್ತಿರುವಾಗ ಸಾಮಾನ್ಯ ಜನರ ಪಾಡೇನು ಎಂದು ಪ್ರಶ್ನಿಸಿದರು.

ಮಿಶ್ರಾರ ಆರೋಪಗಳಿಗೆ ಉತ್ತರಿಸುವಂತೆ ಸ್ಪೀಕರ್ ಸೀತಾಶರಣ ಶರ್ಮಾ ಅವರು ಗೃಹಸಚಿವ ಭೂಪೇಂದ್ರ ಸಿಂಗ್ ಅವರಿಗೆ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News