ಮೈಸೂರು: ಯುವತಿ ಮೇಲೆ ಹಲ್ಲೆ ಪ್ರಕರಣ; ಓರ್ವನ ಬಂಧನ
Update: 2018-06-28 22:16 IST
ಮೈಸೂರು,ಜೂ.28: ಮೈಸೂರಿನ ಪಬ್ ನಲ್ಲಿ ಕಳೆದ ವಾರ ಯುವತಿಯೋರ್ವಳ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಿದ್ದು, ಮತ್ತೆ ಮೂವರು ತಲೆ ಮರೆಸಿಕೊಂಡಿದ್ದಾರೆ.
ಹಲ್ಲೆಗೊಳಗಾದ ಯುವತಿ ಮಹಾಲಕ್ಷ್ಮೀ ಎಂಬವರು ಜಯಲಕ್ಷ್ಮಿ ಪುರಂ ಠಾಣೆಯಲ್ಲಿ ಉಮೇಶ್, ವಿವೇಕ್ ಸೇರಿ ನಾಲ್ವರ ವಿರುದ್ಧ ದೂರು ನೀಡಿದ್ದರು. ನಾಲ್ವರಲ್ಲಿ ಓರ್ವ ಆರೋಪಿ ದಿನೇಶ್ ಗೌಡನನ್ನು ಜಯಲಕ್ಷ್ಮಿ ಪುರಂ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಮತ್ತಿತರ ಅರೋಪಿಗಳಿಗೆ ಹುಡುಕಾಟ ನಡೆಸುತ್ತಿದ್ದಾರೆ.