×
Ad

ಸಿಜಿಕೆರಂಗ ಪ್ರಶಸ್ತಿಗೆ ರಮೇಶ್ ಬೇಗಾರ್ ಆಯ್ಕೆ

Update: 2018-06-29 17:33 IST

ಚಿಕ್ಕಮಗಳೂರು, ಜೂ.29: ಕರ್ನಾಟಕ ಬೀದಿನಾಟಕ ಅಕಾಡೆಮಿ ಇವರು ಕೊಡಮಾಡುವ ಪ್ರತಿಷ್ಟಿತ ಸಿ.ಜಿ.ಕೆ ರಂಗ ಪ್ರಶಸ್ತಿಗೆ ಶೃಂಗೇರಿಯ ರಂಗಕರ್ಮಿ ಮತ್ತು ಸಾಂಸ್ಕೃತಿಕ ಸಂಘಟಕ ರಮೇಶ್ ಬೇಗಾರ್ ಇವರು ಚಿಕ್ಕಮಗಳೂರು ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ.

ಚಿಕ್ಕಮಗಳೂರಿನ ವಿಶ್ವಮಾನವ ಎಜ್ಯುಕೇಶನ್ ಸೊಸೈಟಿ ಮತ್ತು ಅಭಿನಯ ದರ್ಪಣ ಯುವವೇದಿಕೆ ಜಂಟಿಯಾಗಿ ಆಯೋಜಿಸುವ “ಸಿ.ಜಿ.ಕೆ ಬೀದಿ ರಂಗಭೂಮಿ ದಿನ” ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಜುಲೈ 1ರಂದು ಸಂಜೆ 6ಕ್ಕೆ  ಚಿಕ್ಕಮಗಳೂರು ಕುವೆಂಪು ಕಲಾ ಮಂದಿರದಲ್ಲಿ ನಡೆಯುವ ಕಾರ್ಯಕ್ರಮ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟನೆತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News