×
Ad

ಹರಪನಹಳ್ಳಿ; ಬೈಕ್, ಲಾರಿ ಢಿಕ್ಕಿ: ಸವಾರ ಸಾವು

Update: 2018-06-29 20:15 IST

ಹರಪನಹಳ್ಳಿ,ಜೂ.29:ಬೈಕ್ ಹಾಗೂ ಲಾರಿ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ ಘಟನೆ ತಾಲೂಕಿನ ಅರಸೀಕೆರೆ ಠಾಣಾ ವ್ಯಾಪ್ತಿಯ ಹರಿಯಮ್ಮನಹಳ್ಳಿ ಕ್ರಾಸ್ ಬಳಿ ಶುಕ್ರವಾರ ಸಂಜೆ ನಡೆದಿದೆ.

ಹರಪನಹಳ್ಳಿ ತಾಲೂಕಿನ ಯಲ್ಲಾಪುರ ಗ್ರಾಮದ ನಿವಾಸಿ, ಬೈಕ್ ಸವಾರ ವೆಂಕಟೇಶ್ (35) ಮೃತ ದುರ್ದೈವಿ. ಬೈಕ್‍ನಲ್ಲಿ ಬರುವಾಗ ಎದುರಿಗೆ ಬಂದ ಲಾರಿ ಢಿಕ್ಕಿ ಹೊಡೆದಿದೆ. ಹೊಡೆದ ರಭಸಕ್ಕೆ ವೆಂಕಟೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಹಿಂಬದಿ ಸವಾರಿನಿಗೆ ಗಂಭೀರ ಗಾಯಗಳಾಗಿದ್ದು, ತಾಲೂಕು ಆಸ್ಪತ್ರೆಗೆ ದಾಖಲಿಸಿದೆ. ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ಕುರಿತು ಅರಸೀಕೆರೆ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News