×
Ad

ಕೊಳ್ಳೇಗಾಲ : ತಾಲ್ಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆ

Update: 2018-06-29 21:23 IST

ಕೊಳ್ಳೇಗಾಲ,ಜೂ.29: 2018-19ನೇ ಸಾಲಿನಲ್ಲಿ ನಿಮ್ಮ ಇಲಾಖೆಗಳಿಗೆ ಸರ್ಕಾರದಿಂದ ಯಾವಯಾವ ಯೋಜನೆಗಳು ಅಭಿವೃದ್ದಿಯಾಗುವುದಕ್ಕೆ ಸರ್ಕಾರದಿಂದ ಎಷ್ಟು ಅನುದಾನ ಬರುತ್ತದೆ ಅದನ್ನು ನಿಮ್ಮ ನಿಮ್ಮ ಇಲಾಖೆಯ ಅಧಿಕಾರಿಗಳು ಪಟ್ಟಿಗಳನ್ನು ನನಗೆ ತಲುಪುವ ವ್ಯವಸ್ಥೆ ಆಗಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಎನ್.ಮಹೇಶ್ ರವರು ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಹೇಳಿದರು.

ಪಟ್ಟಣದ ತಾ.ಪಂ.ಸಭಾಂಗಣದಲ್ಲಿ ಏರ್ಪಡಿಸಿದ ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯತ್ ಸಹಾಯೋಗದೊಂದಿಗೆ ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ತಾಲ್ಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ  ಸಚಿವರು ಭಾಗವಹಿಸಿ ಮಾತನಾಡಿದರು.

ಕೊಳ್ಳೇಗಾಲ ಪಟ್ಟಣದ ಸಾರ್ವಜನಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವುದಕ್ಕೆ ಎಷ್ಟು ವೈದ್ಯರುಗಳು ಹಾಗೂ ಎಷ್ಟು ನರ್ಸ್‍ಗಳು ಇದ್ದಾರೆ ಮತ್ತು ಸಾರ್ವಜನಿಕ ಆಸ್ಪತ್ರೆಗೆ ಏನೇನು ಸೌಲಭ್ಯಗಳು ಬೇಕು ಅದನ್ನು ಒಂದು ಪಟ್ಟಿಮಾಡಿ ನನಗೆ ಕೊಟ್ಟರೆ ಸರ್ಕಾರದಿಂದ ನಮ್ಮ ಆಸ್ಪತ್ರೆಗೆ ಒದಗಿಸಿಕೊಡುವ ಕೆಲಸವನ್ನು ಮಾಡುತ್ತೇನೆ ಎಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತ ಅಧಿಕಾರಿಗೆ ತಿಳಿಸಿದರು.

ಸಾರ್ವಜನಿಕ ಆಸ್ಪತ್ರಗೆ ಸಾಕಷ್ಟು ರೋಗಿಗಳು ಚಿಕಿತ್ಸೆ ಪಡೆದುಕೊಳ್ಳೂವುದಕ್ಕೆ ಬರುತ್ತಾರೆ ಅವರನ್ನು ವೈದ್ಯರುಗಳು ರೋಗಿಗಳನ್ನು ಬಹಳ ಗೌರವದಿಂದ ಮತ್ತು ಸಹನೆಯಿಂದ ನೋಡಿ ಅವರ ರೋಗಗಳನ್ನು ವಾಸಿಯಾಗುವ ಚಿಕಿತ್ಸೆ ಕೊಡಬೇಕೆಂದು ತಿಳಿಸಿದರು.

ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿಯೊಂದು ವಾರ್ಡಿನ ಬೆಡ್‍ಗಳು ಬಹಳ ಸ್ವಚ್ಛತೆಯಿಂದ ರೋಗಿಗಳು ಮಲಗುವುದಕ್ಕೆ ಸ್ವಚ್ಚತೆಯಾಗಿರಬೇಕು ಮತ್ತು 24ಗಂಟೆಗಳ ಕಾಲ ಫ್ಯಾನ್, ಒಡುವ ವ್ಯವಸ್ಥೆಯಾಗಬೇಕು ಮತ್ತು ಆಸ್ಪತ್ರೆಗೆ ಬರುವ ಜನರು ಚಿಕಿತ್ಸೆ ಪಡೆದು ಕೊಳ್ಳುವುದಕ್ಕೆ ಬಂದಾಗ ಅವರಿಗೆ ಸರಿಯಾಗಿ ಚಿಕಿತ್ಸೆಯನ್ನು ನೀಡಬೇಕು. ಏನಾದರೂ ಕೂಡ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂದು ಸಾರ್ವಜನಿಕರು ನನಗೆ ದೂರವಾಣಿ ಮೂಲಕ ದೂರು ನೀಡಿದರೆ ನಿಮ್ಮ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕಗುತ್ತದೆಂದು ಎಚ್ಚರಿಕೆ ನೀಡಿದರು.

ಈ ಸಾರಿ ಪ್ರಗತಿ ಪರಿಶೀಲನೆಗೆ ಮಂತ್ರಿಗಳು ಬರುತ್ತಾರೆಂದು ಅಧಿಕಾರಿಗಳಿಗೆ ಗೊತ್ತಿದ್ದರು ಸಹ ಎಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳು ಈ ಸಭೆಗೆ ಬರಬೇಕಿತ್ತು  ಕೆಲವು ಅಧಿಕಾರಿಗಳು ಸಭೆಗೆ ಹಾಜರಾಗಿದ್ದಾರೆ, ಗೈರಾದವರಿಗೆ ಕೂಡಲೇ ನೋಟೀಸ್ ಜಾರಿಗೊಳಿಸಬೇಕೆಂದು ಹೇಳಿದರು. 

ಯಳಂದೂರು ತಾಲೂಕಿನಲ್ಲಿ ಬಸವಪುರ ಗ್ರಾಮದಲ್ಲಿ ಸರಿಯಗಿ ರಸ್ತೆಗಳು ಮತ್ತು ಚರಂಡಿಗಳು ಇಲ್ಲದ ಕಾರಣವು ಆ ಗ್ರಾಮಕ್ಕೆ  ಮಳೆ ಬಂದರೆ ಆ ಗ್ರಾಮದ ವ್ಯವಸ್ಥೆ ನೋಡುವುದಕ್ಕೆ ಆಗಲ್ಲ ಹಾಗಾಗಿ ರಸ್ತೆ ಮತ್ತು ಚರಂಡಿ ಸಂಬಂಧಪಟ್ಟ ಅಧಿಕಾರಿಗಳು ಕಾಮಗಾರಿಗಳನ್ನು ಕೂಡಲೇ ಬಸವಪುರ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿರುವ ವ್ಯವಸ್ಥೆ ನೋಡಿ ರಸ್ತೆ ಮತ್ತು ಚರಂಡಿ ಕೂಡಲೆ ಕಾಮಗರಿಗಳ ಅಭಿವೃದ್ದಿಯಾಗುವ ಕೆಲಸವನ್ನು ಮಾಡಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.

ಸರ್ಕಾರದಿಂದ ನನ್ನ ವಿಧಾನಸಭಾ ಕ್ಷೇತ್ರದಲ್ಲಿರುವ ಎಲ್ಲಾ ಇಲಾಖೆಗಳಿಗೆ ಯಾವುದೇ ಅನುದಾನ ಬರುವುದನ್ನು ನನಗೆ ಮಾಹಿತಿ ತಿಳಿಸದೆ ಮುಚ್ಚುವ ಕೆಲಸ ಮಾಡಿದರೆ ಅದು ನನ್ನ ಗಮನಕ್ಕೆ ಕಂಡುಬಂದರೆ ಆ ಅಧಿಕಾರಿಗಳನ್ನು ಸ್ಥಳದಲ್ಲೇ ಸಸ್ಪಂಡ್ ಮಾಡಿ ಮನೆಗೆ ಹೋಗುವ ಕೆಲಸ ಮಾಡುತ್ತೇನೆಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ರೈತರು ತಮಗೆ ಟಿ.ಸಿ.ಬೇಕಾಗಿದೆ ಎಂದು ರೈತರು ವಿದ್ಯುತ್ ಇಲಾಖೆಗೆ ಅಜಿಯನ್ನು ಸಲ್ಲಿಸಿದರೆ ಕೂಡಲೇ ಟಿ.ಸಿಯನ್ನು  ರೈತರಿಗೆ ಕೊಡುವ  ವ್ಯವಸ್ಥೆಯ ಆಗಬೇಕೆಂದು ಎ.ಇಇ ಅಧಿಕಾರಿಗೆ ತಿಳಿಸಿದರು. 

15 ದಿನಗಳಿಂದ ಕೊಳ್ಳೇಗಾಲ ಕ್ಷೇತ್ರಕ್ಕೆ ಭಾರಿ ಮಳೆಯಾಗಿರುವುದರಿಂದ ಎಲ್ಲಿ ರೈತರಿಗೆ ಬಹಳ ನಷ್ಟ ಉಂಟಾಗಿದೆ ಅವರಿಗೆ ಚಾಮರಾಜನಗರ ಜಿಲ್ಲಾಧಿಕಾರಿಗಳ ಜೊತೆಯಲ್ಲಿ ಮಾತನಾಡಿ ಪರಿಹಾರ ಕೊಡಿಸುವುದಕ್ಕೆ ವ್ಯವಸ್ಥೆ ಆಗಬೇಕೆಂದು ಕೊಳ್ಳೇಗಾಲ ಉಪವಿಭಾಗಾಧಿಕಾರಿ ಹಾಗೂ ತಹಶಿಲ್ದಾರ್ ರವರಿಗೆ ಹೇಳಿದರು. 

ಈ ಸಭೆಯಲ್ಲಿ ತಾ.ಪಂ ಅಧ್ಯಕ್ಷ ರಾಜು, ಉಪಾಧ್ಯಕ್ಷೆ ಲತಾರಾಜಣ್ಣ, ಸ್ಥಾಯಿ ಸಮಿತಿ ಅದ್ಯಕ್ಷ ಜಾವದ್ ಅಹಮ್ಮದ್, ಉಪವಿಭಾಗಾಧಿಕಾರಿ ಫೌಜೀಯತರುನ್ನುಂ, ತಹಶೀಲ್ದಾರ್ ಕಾಮಾಕ್ಷಾಮ್ಮ ಡಿ.ಎಸ್.ಪಿ.ಪುಟ್ಟಮಾದಯ್ಯ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಉಮೇಶ, ಶಿವಕುಮಾರ್, ಸುಂದರ್, ಅಧಿಕಾರಿಗಳಾದ ಗಂಗಾಧರ್, ಶಿವಲಿಂಗಯ್ಯ,ಮಂಜುಳ, ಸರಿತಾಕುಮಾರಿ, ಲೋಕನಾಥ್,ಶಶಿಧರ್,ವೆಂಕಟರಮಣ, ನಗರಭೆ ಪೌರಾಯುಕ್ತ ಸುರೇಶ್, ಇನ್ನು ಮುಂತಾದವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News