×
Ad

ಮೈಸೂರು : ಪ್ರೇಯಸಿಯ ಶೀಲ ಶಂಕಿಸಿ ಕೊಲೆಗೈದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

Update: 2018-06-29 22:02 IST

ಮೈಸೂರು,ಜೂ.29: ಜೊತೆಯಲ್ಲಿಯೇ ವಾಸಿಸುತ್ತಿದ್ದ  ಪ್ರೇಯಸಿಯ ಶೀಲ ಶಂಕಿಸಿ ಕೊಲೆಗೈದ ವ್ಯಕ್ತಿಗೆ ಮೈಸೂರಿನ ಏಳನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪಿತ್ತಿದೆ.

ಕುಂಬಾರಕೊಪ್ಪಲಿನ ಕೃಷ್ಣಮೂರ್ತಿ ಎಂಬಾತನೇ ಶಿಕ್ಷೆಗೊಳಗಾದವನಾಗಿದ್ದಾನೆ. ನಂಜನಗೂಡು ತಾಲೂಕಿನ ಹುರಾ ಗ್ರಾಮದ ಸುವರ್ಣಾ ಎಂಬಾಕೆ ತಮ್ಮ ಪತಿಯ ಮರಣದ ನಂತರ ಪುತ್ರಿಯನ್ನು ಬಿಟ್ಟು ಪ್ರಿಯಕರ ಕುಂಬಾರಕೊಪ್ಪಲಿನ ಕೃಷ್ಣಮೂರ್ತಿಯೊಂದಿಗೆ ನೆಲೆಸಿದ್ದರು. ಆದರೆ ಕೃಷ್ಣಮೂರ್ತಿ 2014ರ ಸೆ.25ರಂದು ಸುವರ್ಣಾ ತನ್ನ ಸೋದರನ ಮನೆಯಿಂದ ಊಟ ಮುಗಿಸಿ  ಮನೆಗೆ ಬಂದಾಗ ಗಲಾಟೆ ತೆಗೆದಿದ್ದು, ಬೇರೆಯವರ ಜೊತೆ ಸಂಬಂಧ ಇಟ್ಟುಕೊಂಡಿದ್ದೀಯಾ ಎಂದು ಆರೋಪಿಸಿ ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದ. ಸುಟ್ಟುಗಾಯಗೊಂಡ ಆಕೆಯನ್ನು ತಾನೇ ಆಸ್ಪತ್ರೆಗೆ ಸೇರಿಸಿ, ಆತ್ಮಹತ್ಯೆ  ಮಾಡಿಕೊಂಡಳೆಂದು ತಿಳಿಸಿದ್ದ. ಆದರೆ ಅಲ್ಪ ಸ್ವಲ್ಪ ಪ್ರಜ್ಞೆಯಿದ್ದ ಸುವರ್ಣಾ ಕೊನೆಯುಸಿರೆಳೆಯುವ ಮೊದಲು ಪೊಲೀಸರಿಗೆ ಘಟನೆಯನ್ನು ವಿವರಿಸಿದ್ದಳು. ಹೇಳಿಕೆಯನ್ನು ವೀಡಿಯೋ ಕೂಡ ಮಾಡಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರು ವೀಡಿಯೋ ಪರಿಶೀಲಿಸಿದಾಗ ಆರೋಪ ಸಾಬೀತಾಗಿದ್ದರಿಂದ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News