ಬಾಲಕ ನಾಪತ್ತೆ : ದೂರು
Update: 2018-06-29 22:46 IST
ಶ್ರೀರಂಗಪಟ್ಟಣ, ಜೂ.29: ವಿದ್ಯಾರ್ಥಿಯೊಬ್ಬ ನೀಟ್ ಪರೀಕ್ಷೆಯ ಫಲಿತಾಂಶ ನೋಡಿ ಬರುವುದಾಗಿ ಹೇಳಿ ಹೋದವನು ನಾಪತ್ತೆಯಾಗಿದ್ದಾನೆ.
ತಾಲೂಕಿನ ಟಿ.ಎಂ.ಹೊಸೂರು ಗ್ರಾಮದ ಎಚ್.ಬಿ.ದೀಪಕ್(17) ಜೂ.28ರಿಂದ ನೀಟ್ ಫಲಿತಾಂಶ ನೋಡುವುದಾಗಿ ಹೇಳಿ ಮಂಡ್ಯಕ್ಕೆ ಹೋಗಿದ್ದು, ವಾಪಸ್ ಬಂದಿಲ್ಲ. ಆತನ ಎರಡು ಮೊಬೈಲ್ ಸ್ವಿಚ್‍ಅಪ್ ಆಗಿವೆ ಎಂದು ಪೋಷಕರು ದೂರು ನೀಡಿದ್ದಾರೆ.
ಮನೆಯಿಂದ ಹೊರಡುವಾಗ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಬಿಳಿ ಅಂಗಿ ತೊಟ್ಟಿದ್ದು, ನೀಲಿ ಬ್ಯಾಗ್ ತೆಗೆದುಕೊಂಡು ಹೋಗಿದ್ದಾನೆ ಎಂದು ಪೋಷಕರು ತಿಳಿಸಿದ್ದು, ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.