ಸುಂಟಿಕೊಪ್ಪ: ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಪಿಕಪ್ ವಾಹನ

Update: 2018-07-01 12:22 GMT

ಸುಂಟಿಕೊಪ್ಪ,ಜೂ.30: ಚಾಲಕನ ನಿಯಂತ್ರಣ ತಪ್ಪಿದ ಕೋಳಿ ತುಂಬಿದ ಪಿಕಪ್ ಜೀಪ್ ರಸ್ತೆಯಲ್ಲಿ ಮಗುಚಿಬಿದ್ದ ಘಟನೆ ಶನಿವಾರ ಮುಂಜಾನೆ ವೇಳೆ ನಡೆದಿದೆ. 

ಕುಶಾಲನಗರ ಕಡೆಯಿಂದ ಮಡಿಕೇರಿ ಕಡೆಗೆ ಕೋಳಿಯನ್ನು ತುಂಬಿಕೊಂಡು ಆಗಮಿಸುತ್ತಿದ್ದ ಪಿಕಪ್ ಜೀಪ್ ಶಾಂತಗೀರಿ ತೋಟದ ತಿರುವಿನ ಹೆದ್ದಾರಿಯಲ್ಲಿ ಮುಂಜಾನೆ ವೇಳೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಗೆ ಅಡ್ಡಲಾಗಿ ಮಗುಚಿಕೊಂಡಿದೆ. ಅವಘಡದಿಂದ ಚಾಲಕ ಯಾವುದೇ ಪ್ರಾಣ ಸಂಭವಿಸದೆ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾನೆ. ಆದರೆ ವಾಹನದಲ್ಲಿ ಸಾಗಿಸುತ್ತಿದ್ದ ನೂರಾರು ಕೋಳಿಗಳು ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News