ಮೈಸೂರು: ಅರಮನೆಯ ಭದ್ರತಾ ವೈಪಲ್ಯ ಬಹಿರಂಗ ಪಡಿಸಿದ ಪೊಲೀಸ್ ಪೇದೆ ಅಮಾನತು

Update: 2018-07-01 16:17 GMT

ಮೈಸೂರು,ಜು.1: ಮೈಸೂರಿನ ಅಂಬಾವಿಲಸ ಅರಮನೆಯಲ್ಲಿನ ರತ್ನ ಖಚಿತ ಸಿಂಹಾಸನದ ಭದ್ರತಾ ಕೊಠಡಿಯಲ್ಲಿ ಕರ್ತವ್ಯ ನಿರ್ವಹಿಸುವ ಎಸಿಪಿ ಅವರ ಕುರ್ಚಿಯಲ್ಲಿ ಕೇರಳ ಮೂಲದ ಸ್ವಾಮೀಜಿಯವರು ಕುಳಿತುಕೊಂಡಿರುವ ವಿಷಯವನ್ನು ಬಯಲು ಮಾಡಿದ್ದಾಕ್ಕಾಗಿ ಅಲ್ಲಿನ ಪೊಲೀಸ್ ಪೇದೆ ಚಿಕ್ಕಣ್ಣ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಇದರಿಂದ ನೊಂದಿರುವ ಪೇದೆ ಚಿಕ್ಕಣ್ಣ ಮೇಲಧಿಕಾರಿಗಳು ನನಗೆ ಕಿರುಕುಳ ನೀಡುತ್ತಿದ್ದಾರೆ. ನನಗೆ ದಯಾಮರಣ ನೀಡಿ ಎಂದು ಸಶಸ್ತ್ರ ಮೀಸಲು ಪಡೆ ಪೊಲೀಸ್ ಉಪ ಆಯುಕ್ತರಿಗೆ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.

ಅಂಬವಿಲಾಸ ಅರಮನೆಯ ರತ್ನ ಖಚಿತ ಸಿಂಹಾಸನದ ಭದ್ರತಾ ಕೊಠಡಿಯಲ್ಲಿ ಎಸಿಪಿ ಶೈಲೇಂದ್ರ ಎಂಬವರು ಕರ್ತವ್ಯ ನಿರ್ವಹಿಸುತ್ತಿದ್ದರೂ ಆ ಸ್ಥಾನದಲ್ಲಿ ಕೇರಳ ಮೂಲದ ಸುನೀಲ್ ದಾಸ್ ಎಂಬ ಸ್ವಾಮೀಜಿಯೊಬ್ಬರು ಕುಳಿತು ತಾವೇ ಎ.ಸಿ.ಪಿ ಶೈಲೇಂದ್ರ ಅವರ ಪಾಲಿನ ಕರ್ತವ್ಯವನ್ನು ನಿರ್ವಹಿಸುತ್ತೇನೆ, ನನ್ನನ್ನು ಯಾರು ಪ್ರಶ್ನಿಸುವಂತಿಲ್ಲ ಎಂದು ದರ್ಪದಿಂದಲೇ ವರ್ತಿಸುತ್ತಿದ್ದರು. ಇದಕ್ಕೆ ಪರೋಕ್ಷವಾಗಿ ಶೈಲೇಂದ್ರ ಅವರು ಬೆಂಬಲ ನೀಡುತ್ತಿದ್ದಾರೆ. ಈ ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಾಗ ಶೈಲೇಂದ್ರ ಅವರು ನನ್ನ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಹೊರಿಸಿ ಮೈಸೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಇದರಿಂದ ನನ್ನನ್ನು ಅಮಾನತು ಮಾಡಸಲಾಗಿದೆ. ಈ ಎಲ್ಲಾ ಘಟನೆಗಳಿಂದ ನಾನು ಬೇಸತ್ತಿದ್ದು, ಜೀವನದಲ್ಲಿ ಬಹಳ ನೊಂದಿದ್ದೇನೆ. ಹಾಗಾಗಿ ನನಗೆ ದಯಾಮರಣ ನೀಡಿ ಎಂದು ಕೋರಿಕೊಂಡಿದ್ದಾರೆ .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News