×
Ad

ಚಾಮರಾಜನಗರ: ರೋಗಕ್ಕೆ ತುತ್ತಾಗಿ 40 ಕುರಿಗಳ ಸಾವು

Update: 2018-07-01 22:49 IST

ಚಾಮರಾಜನಗರ,ಜು.01: ತಾಲೂಕಿನ ಬಂಡಿಗೆರೆ ಗ್ರಾಮದಲ್ಲಿ ಎಂಟ್ರೋ ಟ್ಯಾಕ್ಸೀನಿಯಾ(ಇಟಿ) ಕಾಯಿಲೆಯಿಂದ 40 ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.

ಗ್ರಾಮದ ಬ್ಯಾಡಮೂಡ್ಲು ರಸ್ತೆಯಲ್ಲಿರುವ ದುಂಡಶೆಟ್ಟಿ ಎಂಬವರಿಗೆ ಸೇರಿದ್ದ ಸುಮಾರು 40 ಕುರಿಗಳು ಸಾವನ್ನಪ್ಪಿದ್ದು, ಇನ್ನೂ ಗ್ರಾಮದ ಹಲವು ಕಡೆ ಕುರಿಗಳು ಸಾವನ್ನಪ್ಪಿರುವುದು ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದೆ. ದುಂಡಶೆಟ್ಟಿ ಹಲವಾರು ವರ್ಷಗಳಿಂದಲೂ ಕುರಿ, ದನ ಹಾಗೂ ಎಮ್ಮೆಗಳನ್ನು ಸಾಕುತ್ತಿದ್ದು, ಇದ್ದ 70 ಕುರಿಗಳಲ್ಲಿ ಶನಿವಾರ 30 ಹಾಗೂ ಇಂದು 10 ಕ್ಕೂ ಹೆಚ್ಚು ಕುರಿಗಳು ಸತ್ತಿರುವುದು ತೀವ್ರ ಚಿಂತೆಗೀಡುಮಾಡಿದೆ.

ನಿನ್ನೆ ಪಶು ವೈದ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಚಿಕಿತ್ಸೆ ನೀಡಿ ಬಂದಿದ್ದರೂ, ಇಂದು ಸಹಾ 10 ಕುರಿಗಳು ಸತ್ತಿರುವುದು ಆತಂಕಕ್ಕೆಡೆಮಾಡಿದೆ. ಭಾನುವಾರ ಸುದ್ದಿ ತಿಳಿದ ತಾಲೂಕು ಪಶು ವೈದ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಮಳೆಗಾಲದಲ್ಲೇ ಈ ರೋಗ ಹೆಚ್ಚಾಗಿ ಬರುವುದರಿಂದ ನಾಳೆ ಸರ್ಕಾರದಿಂದಲೂ ಸಹಾ ತಾಲೂನಾದ್ಯಂತ ವ್ಯಾಕ್ಸಿನ್ ಚಿಕಿತ್ಸೆ ನೀಡಲಾಗುತ್ತಿದೆ. ಇಂದೇ ದುಂಡಶೆಟ್ಟಿ ಅವರ ಉಳಿದ ಕುರಿಗಳಿಗೂ ಚಿಕಿತ್ಸೆ ನೀಡಲಾಗುವುದೆಂದು ಪಶು ವೈದ್ಯಾಧಿಕಾರಿ ಪ್ರಕಾಶ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News