ಸಚಿವ ಝಮೀರ್ ಅಹ್ಮದ್‌ಗೆ ಫಾರ್ಚ್ಯೂನರ್ ಕಾರು
ಬೆಂಗಳೂರು, ಜು. 2: ಆಹಾರ/ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಬಿ.ಝಡ್.ಝಮೀರ್ ಅಹ್ಮದ್ ಖಾನ್ ಅವರ ಮನವಿಯಂತೆ ರಾಜ್ಯ ಸರಕಾರ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ವೇಳೆ ಬಳಸುತ್ತಿದ್ದ ಫಾರ್ಚ್ಯೂನರ್ ಕಾರನ್ನು ನೀಡಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸಚಿವ ಝಮೀರ್ ಅಹ್ಮದ್ ಖಾನ್ ಅವರಿಗೆ ಇನ್ನೋವಾ ಬದಲಾಗಿ ಫಾರ್ಚ್ಯೂನರ್ ಕಾರನ್ನು ನೀಡುವಂತೆ ಆದೇಶಿಸಿದೆ. ಈ ಹಿಂದೆ ಝಮೀರ್ ಅಹ್ಮದ್ ಖಾನ್ ಅವರಿಗೆ ಸರಕಾರ ಇನ್ನೋವಾ ಕಾರು ನೀಡಿತ್ತು.
ಆದರೆ, ಅವರು ‘ನನಗೆ ದೊಡ್ಡ ಕಾರುಗಳಲ್ಲಿ ಓಡಾಡಿ ಅಭ್ಯಾಸ. ಹೀಗಾಗಿ ಫಾರ್ಚ್ಯೂನರ್ ಕಾರು ಬೇಕು. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ವೇಳೆ ಬಳಸುತ್ತಿದ್ದ ಫಾರ್ಚ್ಯೂನರ್ ಕಾರನ್ನು ಕೊಟ್ಟರೆ ಒಳ್ಳೆಯದು’ ಎಂದು ರಾಜ್ಯ ಸರಕಾರ ಸಚಿವ ಝಮೀರ್ ಮನವಿ ಮಾಡಿದ್ದರು.
ನಾನು ಯಾವುದೇ ಹೊಸ ಕಾರು ಬೇಕೆಂದು ಕೇಳಿರಲಿಲ್ಲ. ಹಳೆಯ ಕಾರನ್ನೇ ಕೊಡಿ ಎಂದು ಕೇಳಿದ್ದೆ. ದೊಡ್ಡ ಕಾರಿನಲ್ಲಿ ಓಡಾಡಿ ಅಭ್ಯಾಸ. ಹೀಗಾಗಿ ಫಾರ್ಚ್ಯೂನರ್ ಕಾರು ಕೊಡಿ ಎಂದು ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದೆ. ಆದರೆ, ಇದನ್ನು ಸುಖಾ ಸುಮ್ಮನೆ ವಿವಾದ ಮಾಡಲಾಗಿದೆ’
-ಸಚಿವ ಝಮೀರ್ ಅಹ್ಮದ್‌ಗೆ ಫಾರ್ಚ್ಯೂನರ್ ಕಾರು!