×
Ad

ಎಸ್‌ಡಿಪಿಐ ನೂತನ ರಾಜ್ಯಾಧ್ಯಕ್ಷರಾಗಿ ಇಲ್ಯಾಸ್ ಮಹಮ್ಮದ್ ತುಂಬೆ ಆಯ್ಕೆ

Update: 2018-07-02 21:52 IST

ಬೆಂಗಳೂರು, ಜು.2: ಎಸ್‌ಡಿಪಿಐ ಕರ್ನಾಟಕದ ನೂತನ ರಾಜ್ಯಾಧ್ಯಕ್ಷರಾಗಿ ಇಲ್ಯಾಸ್ ಮಹಮ್ಮದ್ ತುಂಬೆ ಆಯ್ಕೆ ಆಗಿದ್ದಾರೆ.

ಎಸ್‌ಡಿಪಿಐ ರಾಜ್ಯ ನೂತನ ಪದಾಧಿಕಾರಿಗಳನ್ನು ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷರಾದ ಎ.ಸಯೀದ್‌ರವರು ಮೈಸೂರಿನ ಖಾಸಗಿ ಹೊಟೇಲ್‌ನಲ್ಲಿ ನಡೆದ ಪ್ರತಿನಿಧಿ ಸಭೆಯಲ್ಲಿ ಘೋಷಿಸಿದರು.

ರಾಜ್ಯಉಪಾಧ್ಯಕ್ಷರಾಗಿ ದೇವನೂರು ಪುಟ್ಟನಂಜಯ್ಯ, ಅಬ್ದುಲ್ ಮಜೀದ್, ಪ್ರಧಾನ ಕಾರ್ಯದರ್ಶಿಗಳಾಗಿ ಅಬ್ದುಲ್ ಹನ್ನಾನ್, ರಿಯಾಝ್ ಫರಂಗಿಪೇಟೆ, ಕಾರ್ಯದರ್ಶಿಗಳಾಗಿ ಅಕ್ರಂ ಹಸನ್, ಅಲ್ಫಾನ್ಸೋ ಫ್ರಾಂಕೋ, ಅಪ್ಸರ್‌ ಕೊಡ್ಲಿಪೇಟೆ, ಅಶ್ರಫ್ ಮಾಚಾರ್, ಕೋಶಾಧಿಕಾರಿಯಾಗಿ ಜಾವೆದ್ ಆಝಾಂ ಆಯ್ಕೆ ಯಾಗಿದ್ದಾರೆ.

ರಾಜ್ಯ ಸಮಿತಿ ಸದಸ್ಯರಾಗಿ ಅಬ್ರಾರ್‌ ಅಹಮದ್, ಅಬ್ದುಲ್ ಲತೀಫ್, ಜಲೀಲ್‌ ಕೃಷ್ಣಾಪುರಾ, ಅಬ್ದುಲ್‌ ರಹೀಂ ಪಟೇಲ್, ಮುಜಾದ್ ಪಾಶಾ, ಮಜೀದ್‌ ಖಾನ್, ಅಮ್ಜದ್‌ ಖಾನ್, ಕುಮಾರಸ್ವಾಮಿ, ಫಯಾಝ್ ಬೆಂಗಳೂರು, ಅಮೀನ್ ಮೊಹ್ಸಿನ್, ಸಮಿ ಹಝ್ರತ್‌ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News