×
Ad

ದಾವಣಗೆರೆ: ಮರಕ್ಕೆ ಕಾರು ಢಿಕ್ಕಿ; ನವವಿವಾಹಿತ ಮೃತ್ಯು

Update: 2018-07-02 22:01 IST

ದಾವಣಗೆರೆ,ಜು.2: ಮರಕ್ಕೆ ಕಾರು ಢಿಕ್ಕಿ ಹೊಡೆದ ಪರಿಣಾಮ ನಿನ್ನೆಯಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ವರ ಮೃತಪಟ್ಟು, ವಧು ಸೇರಿದಂತೆ ಐವರು ಗಾಯಗೊಂಡಿರುವ ಘಟನೆ ಜಗಳೂರು ಪೊಲೀಸ್ ಠಾಣೆ ವ್ಯಾಪ್ತಿಯ ಲಕ್ಕಂಪುರ ಬಳಿ ಸೋಮವಾರ ನಡೆದಿದೆ.

ಅಪಘಾತದಲ್ಲಿ ಮೃತಪಟ್ಟ ವರನನ್ನು ಶಾಂತೇಶ್ (36 ) ಎಂದು ಗುರುತಿಸಲಾಗಿದೆ. ಜಗಳೂರು ತಾಲೂಕಿನ ಹೊಸಕೆರೆ ಗ್ರಾಮದ ಶಾಂತೇಶ್ ಮತ್ತು ರಶ್ಮಿ ಅವರ ಮದುವೆ ನಿನ್ನೆಯಷ್ಟೆ ವಿಜೃಂಭಣೆಯಿಂದ ನಡೆದಿತ್ತು. ಸೋಮವಾರ ಶಾಂತೇಶ್, ರಶ್ಮಿ ಮತ್ತು ಇತರರು ಕಾರಿನಲ್ಲಿ ರಶ್ಮಿ ಅವರ ಊರಿಗೆ ತೆರಳುತ್ತಿದ್ದಾಗ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ನವ ವಿವಾಹಿತೆ ರಶ್ಮಿ ಸೇರಿದಂತೆ ಐದು ಜನರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಗಾಯಾಳುಗಳನ್ನು ದಾವಣಗೆರೆಯ ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News