×
Ad

ಮೈಸೂರು: ಮನೆ ಕೊಡಿಸುತ್ತೇವೆಂದು ಪೊಲೀಸರ ಮನೆಯನ್ನೇ ತೋರಿಸಿದ ಖದೀಮರು ಪೊಲೀಸ್ ವಶಕ್ಕೆ

Update: 2018-07-02 22:21 IST

ಮೈಸೂರು,ಜು.2: ಮನೆ ಕೊಡಿಸುತ್ತೇನೆಂದು ಪೊಲೀಸರ ಮನೆಯನ್ನೇ ತೋರಿಸಿದ ಖದೀಮರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದ ಘಟನೆ ನಡೆದಿದೆ.

ಪೊಲೀಸರಿಗೆಂದು ನಿಗದಿಯಾಗಿದ್ದ ಕ್ವಾಟ್ರರ್ಸ್ ನಮ್ಮದು ಎಂದುಕೊಂಡು ಬಂದ ಮಹಿಳೆಯರು ಮೈಸೂರಿನ ಹೂಟಗಳ್ಳಿ ಪೊಲೀಸ್ ಕ್ವಾಟ್ರಸ್ ಬಳಿ ಹೈಡ್ರಾಮಾ ನಡೆಸಿದ ಘಟನೆ ನಡೆದಿದ್ದು, ಕೆಲ ಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮಹಿಳೆಯರನ್ನು ಮನೆಯಿಂದ ಹೊರ ಹಾಕಲು ಮಹಿಳಾ ಪೇದೆಗಳು ಹರಸಾಹಸ ಪಟ್ಟರು. ನಂತರ ಪೊಲೀಸ್ ಕ್ವಾಟ್ರಸ್‍ಗೆ ಪ್ರವೇಶಿಸಿದ ಮಹಿಳೆಯರನ್ನು ವಿಜಯನಗರ ಪೊಲೀಸರು ವಶಕ್ಕೆ ಪಡೆದರು.

ಪೊಲೀಸರಿಗೆ ನೀಡಿದ್ದ ವಸತಿ ನಿಲಯಗಳಿಗೆ ಅಕ್ರಮ ಪ್ರವೇಶಗೈದ ರೇವಣ್ಣ, ಬಾಲು, ನಾಗರಾಜು ಮಹಿಳೆಯರಿಗೆ ಮನೆ ಕೊಡಿಸುವುದಾಗಿ ಹೇಳಿದ್ದರು. ಹೀಗೆ ಹೇಳಿಕೊಂಡು ಪೊಲೀಸ್ ಕ್ವಾಟ್ರಸ್‍ಗೆ ಮಹಿಳೆಯರನ್ನು ಕರೆದುಕೊಂಡು ಬಂದಿದ್ದು, 4 ಮನೆಗಳಿಗೆ ನಿನ್ನೆ ಸಂಜೆ ಅಕ್ರಮ ಪ್ರವೇಶ ಮಾಡಿದ್ದರು. ಹೂಟಗಳ್ಳಿ, ಹಿನಕಲ್, ಪಡುವಾರಳ್ಳಿಯ ಆಯ್ದ ಮಹಿಳೆಯರನ್ನೇ ಪುಸಲಾಯಿಸಿ ಕರೆತಂದಿದ್ದರು. ಅಕ್ರಮ ಪ್ರವೇಶವನ್ನು ಪ್ರಶ್ನಿಸಿದ ಪೊಲಿಸರ ಮೇಲೆಯೇ ತಂಡ ತಿರುಗಿ ಬಿದ್ದಿತ್ತು ಎನ್ನಲಾಗಿದೆ. ರೇವಣ್ಣ, ಬಾಲು, ನಾಗರಾಜ್ ಸೇರಿದಂತೆ 6 ಮಹಿಳೆಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಮಹಿಳೆಯರಲ್ಲಿ ಅಕ್ಕಪಕ್ಕದ ಮನೆಯಯವರು ಅಕ್ರಮ ಪ್ರವೇಶದ ಕುರಿತು ಪ್ರಶ್ನಿಸಿದಾಗ ಈ ಮನೆ ನಮಗೆ ಆಗಿದೆ ಎಂದು ತಿಳಿಸಿದ್ದು, ಈ ವಿಷಯವನ್ನು ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಕ್ವಾಟ್ರಸ್‍ಗೆ ಬಂದ ಪೊಲೀಸರಿಗೆ ನಾವು ಇಲ್ಲೇ ಇರುತ್ತೇವೆ ಬಿಡಿ ಎಂದಿದ್ದಾರೆ. ಹೈಡ್ರಾಮಾದ ನಂತರ ವಿಜಯನಗರ ಪೊಲೀಸರು ಆರು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News