ಸೊರಬ: ಟ್ರ್ಯಾಕ್ಟರ್ ಪಲ್ಟಿಯಾಗಿ ಚಾಲಕ ಮೃತ್ಯು

Update: 2018-07-02 18:13 GMT

ಸೊರಬ,ಜು.02: ತಾಲೂಕಿ ಸಾರೇಕೊಪ್ಪ ಗ್ರಾಮದಲ್ಲಿ ಗಿರೀಶ್ ಗೌಡರ ತೋಟ ಹಾಗೂ ತ್ಯಾವಗೋಡು ಗ್ರಾಮದ ಮಧ್ಯದ ರಸ್ತೆಯಲ್ಲಿ ಟ್ರ್ಯಾಕ್ಟರ್, ಚಾಲಕನ ನಿಯಂತ್ರಣ ತಪ್ಪಿ ಸುಮಾರು 6-7 ಅಡಿ ತಗ್ಗು ಪ್ರದೇಶಕ್ಕೆ ಪಲ್ಟಿಯಾಗಿ ಬಿದ್ದ ಪರಿಣಾಮ ಚಾಲಕ ಮೃತಪಟ್ಟ ಘಟನೆ ರವಿವಾರ ಸಂಭವಿಸಿದೆ.

ಗುಡವಿ ಗ್ರಾಮದ ವಾಸಿಯಾದ ಮಧು ಬಿನ್ ಭದ್ರಪ್ಪ( 32) ಮೃತಪಟ್ಟ ವ್ಯಕ್ತಿ. ಘಟನೆ ವೇಳೆ ಟ್ರ್ಯಾಕ್ಟರ್ ಚಾಲನೆ ಮಾಡುತ್ತಿದ್ದ ಮಧು ಟ್ಯಾಕ್ಟರ್ ಅಡಿ ಭಾಗದಲ್ಲಿ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಮೃತ ವ್ಯಕ್ತಿಯು ತಾಯಿ, ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News