×
Ad

ಹನೂರು: ಸಾಮಾಜಿಕ ಪರಿಶೋಧನಾ ಗ್ರಾಮಸಭೆ

Update: 2018-07-03 22:46 IST

ಹನೂರು,ಜು.03: ಸಾರ್ವಜನಿಕರು ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನಿರ್ವಹಿಸಲು ನಮೂನೆ-06 ನ್ನು ಭರ್ತಿ ಮಾಡಿ ದ್ವಿಪ್ರತಿಗಳಲ್ಲಿ ಅರ್ಜಿ ಸಲ್ಲಿಸಬೇಕು ಎಂದು ತಾಲೂಕು ಲೆಕ್ಕ ಸಂಯೋಜಕ ಮನೋಹರ್ ತಿಳಿಸಿದರು.

ಲೊಕ್ಕನಹಳ್ಳಿ ಜಿ.ಪಂ. ವ್ಯಾಪ್ತಿ ಬೈಲೂರು ಗ್ರಾ.ಪಂ. ಆವರಣ ಅಧ್ಯಕ್ಷ ಭಾಗ್ಯಕೆಂಪಣ್ಣ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದ 2018-19ನೇ ಸಾಲಿನ ಪ್ರಥಮ ಹಂತದ ಸಾಮಾಜಿಕ ಪರಿಶೋಧನಾ ಗ್ರಾಮಸಭೆಯಲ್ಲಿ ಮಾತನಾಡಿದ ಅವರು, ಉದ್ಯೋಗ ಖಾತರಿ ಕೇಂದ್ರ ಸರ್ಕಾರದ ಮಹಾತ್ವಾಂಕ್ಷಿ ಯೋಜನೆಯಾಗಿರುತ್ತದೆ. ಇದು 2005ರಲ್ಲಿ  ಜಾರಿಗೊಂಡು ಪಂಚಾಯತ್‍ ರಾಜ್ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತದೆ. ಜಾಬ್ ಕಾರ್ಡ್ ಪಡೆಯುವವರು ಗ್ರಾ.ಪಂ. ಪರಿಮಿತಿಯೊಳಗೆ ವಾಸವಿರಬೇಕು. ತಮ್ಮ ಹೆಸರಿನಲ್ಲಿ ಬ್ಯಾಂಕ್ ಪುಸ್ತಕ ಹೊಂದಿರಬೇಕು. ಅದಕ್ಕೆ ಆಧಾರ್ ಕಾರ್ಡ್‍ನ್ನು ಕಡ್ಡಾಯವಾಗಿ ಜೋಡಣೆ ಮಾಡಬೇಕು ಹಾಗೂ ಒಂದೆ ಕುಟುಂಬದ ಒಂದೇ ರೇಷನ್ ಕಾರ್ಡ್‍ನಲ್ಲಿರುವವರೆಲ್ಲರೂ ಉದ್ಯೋಗ ಚೀಟಿ ಪಡೆದು ಕೆಲಸ ನಿರ್ವಹಿಸಬಹುದು. ಎಂದು ತಿಳಿಸಿದರು. 

ನಮೂನೆ-06ರಲ್ಲಿ ಜಾಬ್ ಕಾರ್ಡ್ ಹೊಂದಿದ್ದ ಪ್ರತಿಯೊಬ್ಬರು ಗ್ರಾ.ಪಂ.ಗೆ ಅರ್ಜಿ ಸಲ್ಲಿಸಿದ 15 ದಿನದೊಳಗೆ ಗ್ರಾ.ಪಂ. ಉದ್ಯೋಗ ನೀಡಬೇಕು. ಇಲ್ಲದಿದ್ದರೆ ನಿರುದ್ಯೋಗ ಭತ್ಯೆ ದೊರೆಯುತ್ತದೆ. ಒಬ್ಬರಿಗೆ 100 ದಿನ ಕೆಲಸ ನೀಡುವಂತೆ ಸರ್ಕಾರ ಆದೇಶಿಸಿದೆ. ಅದರಂತೆ ದಿನ ಒಂದಕ್ಕೆ 249/- ರೂ ನಂತೆ ಪರುಷರು ಮತ್ತು ಮಹಿಳೆಯರಿಗೆ ಸಮಾನ ವೇತನ ಕೂಲಿ ಹಣ ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಆಗುತ್ತದೆ. ಆದ್ದರಿಂದ ಉದ್ಯೋಗ ಖಾತರಿ ಯೋಜನೆ ಮಾರ್ಗಸೂಚಿ ನಿಯಮಗಳನ್ನು ಪಾಲಿಸಬೇಕು ಮತ್ತು ಹೊಸ ಉದ್ಯೋಗ ಚೀಟಿ ನವೀಕರಿಸಿಕೊಳ್ಳಬೇಕು. ಗ್ರಾ.ಪಂ. ವ್ಯಾಪ್ತಿಯಲ್ಲಿ 40 ಕಾಮಾಗಾರಿಗಳು ಅನುಷ್ಠಾನಗೊಂಡಿರುತ್ತದೆ. ಹಾಗೂ ಕೂಲಿ ಹಣ 6,36,020/-ರೂ. ಸಾಮಾಗ್ರಿ ಹಣ 1,77,195/-ರೂ. ಒಟ್ಟು 9,70,403/-ರೂ. ಪಾವತಿಯಾಗಿರುತ್ತದೆ. ಆದ್ದರಿಂದ ಸಾರ್ವಜನಿಕರು ಇದರಲ್ಲಿ ದೋಷ ಕಂಡ ಬಂದರೆ ಆಕ್ಷೇಪಣೆ ಸಲ್ಲಿಸಬಹುದು ಎಂದರು

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಭಾಗ್ಯಕೆಂಪಣ್ಣ, ಸದಸ್ಯರಾದ ಬಸಮ್ಮ, ಸಣ್ಣಮ್ಮ, ನಾಗಪ್ಪ, ನಾಗೇಂದ್ರಮೂರ್ತಿ, ಪಿಡಿಒ ರಾಮು, ನಂದೀಶ್, ಸಿಆರ್‍ಪಿ  ಪ್ರೀತಮ್, ಹಾಗೂ ಹೊಸದೊಡ್ಡಿ ಶಾಲೆ ಮುಖ್ಯೋಪಾಧ್ಯಾಯ ಮಲ್ಲೇಶ್, ಕೆರೆದೊಡ್ಡಿ ಮುಖ್ಯ ಶಿಕ್ಷಕ ಜಯಪ್ರಕಾಶ್, ಅಧ್ಯಕ್ಷ ಭಾಗ್ಯಕೆಂಪಣ್ಣ, ಸದಸ್ಯರಾದ ಬಸಮ್ಮ, ಸಣ್ಣಮ್ಮ, ನಾಗಪ್ಪ, ನಾಗೇಂದ್ರಮೂರ್ತಿ, ಇನ್ನಿತರರು ಹಾಜರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News