ಶಿವಮೊಗ್ಗ: ಅತ್ಯಾಚಾರಿಗೆ 7ವರ್ಷಗಳ ಕಠಿಣ ಶಿಕ್ಷೆ
Update: 2018-07-03 22:49 IST
ಶಿವಮೊಗ್ಗ, ಜು. 3: ಭದ್ರಾವತಿ ತಾಲೂಕು ಸಿಂಗನಮನೆ ಗ್ರಾಮದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿ ಇಮ್ರಾನ್ ವಿರುದ್ಧ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆಯನ್ವಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರಿಂದ, ನ್ಯಾಯಾಲಯವು ಆರೋಪಿಯನ್ನು ತಪ್ಪಿತಸ್ಥನೆಂದು ತೀರ್ಮಾನಿಸಿ, 1ನೇ ಹೆಚ್ಚುವರಿ ವಿಶೇಷ(ಪೋಕ್ಸೋ) ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಶುಭಾಗೌಡರ್ ಅವರು ಆರೋಪಿಗೆ 7ವರ್ಷ ಕಠಿಣ ಶಿಕ್ಷೆ ಮತ್ತು ರೂ.50,000/-ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಪೋಕ್ಸೋ ವಿಶೇಷ ಅಭಿಯೋಜಕ ಎಸ್.ಕೆ.ಮೂರ್ತಿರಾವ್ ಅವರು ಕೇಸಿನ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.