ಮಂಡ್ಯ: ರೈತರ ಸಾಲಮನ್ನಾಗೆ ನೆರವಾಗಲು ಸಿಎಂ ಪರಿಹಾರ ನಿಧಿಗೆ 1 ಲಕ್ಷ ದೇಣಿಗೆ
ಮಂಡ್ಯ, ಜು.3: ರೈತರ ಸಾಲಮನ್ನಾ ನೆರವಾಗುವ ಉದ್ದೇಶದಿಂದ ಎಪಿಎಂಸಿ ಮಾಜಿ ಅಧ್ಯಕ್ಷ ಕಾಳೇನಹಳ್ಳಿ ತಿಮ್ಮೇಗೌಡ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1 ಲಕ್ಷ ರೂ.ಗಳ ಚೆಕ್‍ನ್ನು ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್ ಅವರ ಮೂಲಕ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರೈತರ ಸಾಲಮನ್ನಾ ಮಾಡುವುದಾಗಿ ತಿಳಿಸಿದ್ದರು. ಅವರಿಗೆ ನೆರವಾಗುವ ಉದ್ದೇಶದಿಂದ ತಾವೂ ಸಹ ಒಂದು ಲಕ್ಷ ರೂ. ನೀಡುತ್ತಿದ್ದೇನೆ ಎಂದರು.
ರೈತನ ಮಗನಾಗಿ ರೈತರಿಗೆ ಅನುಕೂಲವಾಗುವ ಉದ್ದೇಶದಿಂದ ರೈತರಿಗೆ ಕೊಡಲು ನಿರ್ಧರಿಸಿದ್ದು, ನನ್ನಂತೆ ಉಳ್ಳವರು ರೈತರಿಗೆ ಕೊಡುವ ಉದ್ದೇಶದಿಂದ ಸರಕಾರಕ್ಕೆ ಸ್ವಲ್ಪ ಮಟ್ಟಿನ ದೇಣಿಗೆ ನೀಡಲು ಮಂದಾಗಬೇಕು ಎಂದು ಅವರು ಮನವಿ ಮಾಡಿದರು.
ಯಲಿಯೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ವೈ.ಎಚ್.ಹನುಮಂತು, ಸೂನಗಹಳ್ಳಿ ಗ್ರಾಪಂ ಮಾಜಿ ಸದಸ್ಯ ಚಂದ್ರಶೇಖರ್, ರಾಜೇಶ್, ಕೆ.ಎಚ್. ಹನುಮಂತೇಗೌಡ, ವೈ.ಎಚ್. ದೇವರಾಜು, ತೂಬಿನಕೆರೆ ಗಂಗಾಧರ್ ಈ ಸಂದರ್ಭದಲ್ಲಿ ಹಾಜರಿದ್ದರು.