×
Ad

ಮಡಿಕೇರಿ: ಜೀಪ್ ಪಲ್ಟಿಯಾಗಿ ಚಾಲಕ ಮೃತ್ಯು

Update: 2018-07-03 23:27 IST

ಮಡಿಕೇರಿ ಜು.3: ಜೀಪು ಪಲ್ಟಿಯಾಗಿ ಚಾಲಕ ಸಾವಿಗೀಡಾಗಿರುವ ಘಟನೆ ಕುಟ್ಟದಲ್ಲಿ ನಡೆದಿದೆ. ಮೃತನನ್ನು ತೋಲ್ಪಟ್ಟಿ ನಿವಾಸಿ ಸುದೀಶ್ ಎಂದು ಗುರುತಿಸಲಾಗಿದೆ.

ಕೇರಳದ ತೋಲ್ಪಟ್ಟಿ ನಿವಾಸಿ ಮುನಿಯಾಂಡಿ ಎಂಬವರು ಅವರ ಸ್ನೇಹಿತರಾದ ಸುದೀಶ್, ಸಚಿನ್ ಮುಂತಾದವರೊಂದಿಗೆ ಸುದೀಶ್ ಚಲಿಸುತ್ತಿದ್ದ ಜೀಪಿನಲ್ಲಿ ಕುಟ್ಟದಿಂದ ತೋಲ್ಪಟ್ಟಿಗೆ ಹೋಗುತ್ತಿದ್ದರು. ಈ ವೇಳೆ ಕುಟ್ಟದ ಹಳೆ ಪೊಲೀಸ್ ಚೆಕ್‍ಪೋಸ್ಟ್ ಬಳಿ ಚಾಲಕ ಸುದೀಶ್‍ನ ಹತೋಟಿ ಕಳೆದುಕೊಂಡ ಜೀಪು ರಸ್ತೆಯ ಬಲ ಭಾಗಕ್ಕೆ ಮಗುಚಿ ಬಿದ್ದಿದ್ದು, ಪರಿಣಾಮ ಚಾಲಕ ಸುದೀಶ್ ಜೀಪ್‍ನ ಅಡಿಗೆ ಸಿಲುಕಿ ಗಂಭೀರ ಗಾಯಗಳೊಂದಿಗೆ ಮೃತಪಟ್ಟಿದ್ದಾನೆ.

ಈ ಸಂಬಂಧ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News