×
Ad

ಕಾರು-ಬೈಕ್ ಢಿಕ್ಕಿ: ಮಹಿಳೆಗೆ ಗಂಭೀರ ಗಾಯ

Update: 2018-07-03 23:35 IST

ಮಡಿಕೇರಿ ಜು.3 : ಬೈಕ್‍ಗೆ ಕಾರು ಢಿಕ್ಕಿಯಾದ ಪರಿಣಾಮ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೆಬ್ಬಾಲೆಯಲ್ಲಿ ನಡೆದಿದೆ.

ಪಿರಿಯಾಪಟ್ಟಣ ತಾಲೂಕಿನ ಬಿಲ್ಲಹಳ್ಳಿ ನಿವಾಸಿ ಗುರುಲಿಂಗಪ್ಪ ಎಂಬವರು ಅವರ ಅತ್ತಿಗೆ ದಾಕ್ಷಾಯಣಿ ಎಂಬವರೊಂದಿಗೆ ಬೈಕಿನಲ್ಲಿ ಕುಶಾಲನಗರದಿಂದ ಬಿಲ್ಲಹಳ್ಳಿಗೆ ಹೋಗುತ್ತಿರುವಾಗ ಹೆಬ್ಬಾಲೆ ಬಳಿ ಅಪಘಾತಕ್ಕೀಡಾಗಿದೆ. ಬೈಕನ್ನು ಸೂಳೆಕೋಟೆ ಕಡೆಗೆ ತಿರುಗಿಸುತ್ತಿರುವಾಗ ಶಿರಂಗಾಲ ಕಡೆಯಿಂದ ಬಂದ ಕಾರೊಂದು ಬೈಕ್‍ಗೆ ಢಿಕ್ಕಿಯಾಗಿದೆ. ಈ ಸಂದರ್ಭ ದಾಕ್ಷಾಯಿಣಿ ಅವರಿಗೆ ಗಂಭೀರ ಗಾಯಗಳಾಗಿದ್ದು, ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News